ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಸುಮಾರು 5 ವರ್ಷಗಳ ನಂತರ ಚಹಾಲ್ ಮತ್ತವರ ಪತ್ನಿ ಧನಶ್ರೀ ವರ್ಮಾ ಬೇರೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದು, ಇದು ಡಿವೋರ್ಸ್ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಇನ್ನೂ ಈ ವಿಚ್ಛೇದನ ವದಂತಿಯ ನಡುವೆ ಚಹಲ್ ಮತ್ತೊಬ್ಬ ಹುಡುಗಿಯ ಜೊತೆ ಓಡಾಟ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯಕ್ಕೆ ಚಹಾಲ್ ಜೊತೆಗೆ ಕಾಣಿಸಿಕೊಂಡಿರುವ ಆ ಯುವತಿ ಯಾರೆಂಬುದು ತಿಳಿದುಬಂದಿಲ್ಲ. ಆದರೆ ಈ ಇಬ್ಬರು ಜೊತೆಯಾಲ್ಲಿ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ವೇಳೆ ಮಾಧ್ಯಮದ ಕ್ಯಾಮರಾಗಳು ಚಹಾಲ್ ಅವರನ್ನು ಸೆರೆಹಿಡಿಯಲು ಪ್ರಯತ್ನಿಸಿದಾಗ ಅವರು ತನ್ನ ಮುಖವನ್ನು ಮರೆಮಾಚಿದ್ದಾರೆ. ಅಂದಿನಿಂದ ಧನಶ್ರೀ ಮತ್ತು ಚಹಾಲ್ ವಿಚ್ಛೇದನದ ಸುದ್ದಿಗೆ ಈ ನಿಗೂಢ ಹುಡುಗಿಯೇ ಕಾರಣ ಎಂಬ ಚರ್ಚೆಗಳು ನಡೆಯುತ್ತಿವೆ.
ಚಹಾಲ್ ಮತ್ತು ಧನಶ್ರೀ ಕಳೆದ ಕೆಲವು ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈ ಸ್ಟಾರ್ ಜೋಡಿ ಡಿವೋರ್ಸ್ ವಿಚಾರ ಸದ್ದು ಮಾಡುತ್ತಿರೋದು ಇದೇ ಮೊದಲಲ್ಲ. 2023ರಲ್ಲಿ ಧನಶ್ರೀ ತನ್ನ ಇನ್ಸ್ಟಾಗ್ರಾಮ್ ಖಾತೆಯಿಂದ ಚಹಾಲ್ ಅವರನ್ನು ಅನ್ಫೋಲೋ ಮಾಡಿದ್ದರು. ಆಗಲು ಡಿವೋರ್ಸ್ ವಿಚಾರ ಸದ್ದು ಮಾಡಿತ್ತು. ಈ ಸ್ಟಾರ್ ಜೋಡಿ 2020ರಲ್ಲಿ ವಿವಾಹವಾಗಿದ್ದರು. ಇಬ್ಬರಿಗೂ ಸದ್ಯದಲ್ಲೇ ಡಿವೋರ್ಸ್ ಆಗಲಿದೆ ಎನ್ನುವ ಸುದ್ದಿ ಇದೆ.