ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ವಿವಿಧ ಕಾರ್ಮಿಕ ಸಂಘಟನೆಗಳ ಅಧ್ಯಕ್ಷ ಹಾಗೂ ಪ್ರಾಧಿಕಾರಗಳ ಸಭೆಯನ್ನ ನಗರದ ಹಳಹುಬ್ಬಳ್ಳಿಯ ದಿ ಎ ಜೆ ಮುಧೋಳ ಭವನದಲ್ಲಿ ಜರುಗಿತು, ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರುಗಳು ಸಂವಿಧಾನ ಶಿಲ್ಪಿ ಡಾ!! ಬಿ ಆರ್ ಅಂಬೇಡ್ಕರ ಸ್ವಾಭಿಮಾನಿ ಅಭಿಮಾನಿ ಅನುಯಾಯಿಗಳ ಬಳಗದ ಪ ಜಾ ಪ ಪಂ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಐಕ್ಯತ ವೇದಿಕೆ ಆಶ್ರಯದಲ್ಲಿ ನಡೆಯುತ್ತಿರುವ ದಿ 9 ರಂದು ಹುಬ್ಬಳ್ಳಿ ಧಾರವಾಡ ಬಂದಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವ ಮೂಲಕ ಅಂದ ನಡೆಯುವ ಹೋರಾಟದಲ್ಲಿ ನೂರಾರು ಸಂಖ್ಯೆಯಲ್ಲಿ ಸದಸ್ಯರುಗಳು ಭಾಗವಹಿಸಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು ,
ಅಲ್ಲದೆ ಕಳೆದ ಸಂಸತ್ತಿನ ಅಧಿವೇಶನದಲ್ಲಿ ಡಾ!! ಬಿ ಆರ್ ಅಂಬೇಡ್ಕರ್ ರವರ ಕುರಿತು ಹೇಳಿಕೆ ನೀಡಿದ ಕೇಂದ್ರದ ಗ್ರಹ ಸಚಿವರಾದ ಅಮಿತ್ ಶಾ ರವರ ನಡೆ ಧಿಕ್ಕರಿಸಿ ಅವರನ್ನು ವಜಾಕ್ಕೆ ಆಗ್ರಹಿಸಿ ನಡೆಯುತ್ತಿರುವ ಹುಬ್ಬಳ್ಳಿ ಧಾರವಾಡ ಬಂಧನ್ನು ಯಶಸ್ವಿಗೊಳಿಸುವಂತೆ ವಿವಿಧ ಸಂಘಟನೆಗಳ ಅಧ್ಯಕ್ಷ ಪದಾಧಿಕಾರಿಗಳು ಹೇಳಿದರು , ಈ ಸಭೆಯಲ್ಲಿ ಉತ್ತರ ಕರ್ನಾಟಕ ದಿ ಎಜೆ ಮುಧೋಳ ಕಟ್ಟಡ ಹಾಗೂ ಇತರ ನಿರ್ಮಾಣ ಸಂಘದ ಪೀರ್ ಸಾಬ್ ನದಾಫ್ ಉತ್ತರ ಕರ್ನಾಟಕ ಲಾರಿ ಅಸೋಸಿಯೇಷನ್ ಅಧ್ಯಕ್ಷ ಗೈಬು ಸಾಬ್ ಹೂನ್ಯಾಳ ಸರ್ವ ಧರ್ಮ ಕಟ್ಟಡ
ಕಾರ್ಮಿಕ ಸಂಘದ ನಬಿ ಸಾಬ್ ನದಾಫ್ ಹುಬ್ಬಳ್ಳಿ ಶ್ರಮಜೀವಿ ಆಟೋರಿಕ್ಷಾ ಚಾಲಕರ ಸಂಘದ ಚಿದಾನಂದ ಸೌದತ್ತಿ ಧಾರವಾಡ ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘದ ರಮೇಶ್ ಬೋಸಲೇ ರಾಷ್ಟ್ರೀಯ ಮಹಿಳಾ ಸಂಘಟನೆಯ ಹಾಗೂ ಅಸಂಘಟಿತ ಕಾರ್ಯಕರ್ತರಾದ ಫಾತಿಮಾ ತಡ ಕೋಡ್ ಅಂಜುಮಾ ಬಾಗೇವಾಡಿ ಆಶಾ ಕಾರ್ಯಕರ್ತೆ ರೇಖಾ ಹವಳದ ಅಂಗನವಾಡಿ ಕಾರ್ಯಕರ್ತೆ ಬೇಗಂ ಅಮರಗೋಳ ಹುಬ್ಬಳ್ಳಿ
ಧಾರವಾಡ ಮ್ಯಾಕ್ಸಿಕ್ಯಾಬ್ ಚಾಲಕರ ಹಾಗೂ ಮಾಲೀಕರ ಸಂಘದ ಹನುಮಂತಪ್ಪ ಚಲವಾದಿ ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯ ಬಾಬಾಜಾನ ಮುಧೋಳ ಕರ್ನಾಟಕ ರಾಜ್ಯ ಪಕ್ಷಾತೀತ ರೈತ ಹೋರಾಟ ಸಮಿತಿಯ ರಾಜಶೇಖರ ಮೆಣಸಿನಕಾಯಿ ಎ ಐ ಟಿ ಯು ಸಿ ಸಂಘಟನೆಯ ಬಿಎ ಮುಧೋಳ ಇನ್ನಿತರ ಸಂಘಟನೆಗಳ ಮುಖಂಡರುಗಳಾದ ಫಾರೂಕ್ ಅಬ್ಬುನವರ್ ವಕೀಲರಾದ ಅಶೋಕ ಗಂಗೂರ ಶೆಮಶೇರ್ ಗಂಜೇವಾಲ ಶಾರುಖ್ ಮುಲ್ಲಾ ಸತೀಶ ಯರಗಟ್ಟಿ ಚಮನ ನಲ್ಲಿಕೊಪ್ಪ ಸೇರಿದಂತೆ ನೂರಾರು ಜನ ಆಗಮಿಸಿದ್ದರು