ಮಂಡ್ಯ:ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲೇ ತಮ್ಮ ಮುಂದಿನ ರಾಜಕೀಯ ನಡೆ ಏನು ಎನ್ನುವುದನ್ನು ಮಹತ್ವದ ನಿರ್ಧಾರವನ್ನು ತಿಳಿಸಿದ್ದಾರೆ. ಹೌದು ಕಳೆದ ಲೋಕಸಭಾ ಚುನಾವಣೆ ನಂತ್ರ ಮಂಡ್ಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದರು ಸುಮಲತಾ. ಜನವರಿ ನಂತರ ಮಂಡ್ಯ ರಾಜಕಾರಣದಲ್ಲಿ ಸಕ್ರಿಯೆಗೊಳ್ಳುವ ಬಗ್ಗೆ ಕಳೆದ ನವಂಬರ್ ನಲ್ಲಿ ಹೇಳಿಕೆ ನೀಡಿದ್ದರು.
ಇದೀಗ ಮಂಡ್ಯಕ್ಕೆ ಮತ್ತೆ ರೆಬಲ್ ಲೇಡಿ ಎಂಟ್ರಿ ಕೊಟ್ಟಿದ್ದಾರೆ. ಮಂಡ್ಯ ನಗರದ ಬಂದಿಗೌಡ ಬಡಾವಣೆಯಲ್ಲಿ ಹೊಸ ಮನೆ ಬಾಡಿಗೆ ಪಡೆದಿದ್ದಾರೆ ಸುಮಲತಾ.
ಕೆಲ ದಿನಗಳ ಹಿಂದೆಯೇ ನೂತನ ಬಾಡಿಗೆ ಮನೆಯಲ್ಲಿ ಹಾಲು ಉಕ್ಕಿಸುವ ಕಾರ್ಯ ನೆರವೇರಿದೆ. ಹೇಳಿಕೆಯಂತೆ ಹೊಸ ವರ್ಷದಲ್ಲಿ ಹೊಸ ಮನೆ ಪ್ರವೇಶ ಮಾಡಿದ್ದಾರೆ. ಮುಂಬರುವ MLA ಚುನಾವಣೆ ದೃಷ್ಟಿಯಿಂದ ಸುಮಲತಾ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ .