ಬಿಗ್ ಬಾಸ್ ಕನ್ನಡ ಸೀಸನ್ನಲ್ಲಿ ಇನ್ನು 20ಕ್ಕೂ ಕಡಿಮೆ ದಿನಗಳು ಉಳಿದಿವೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಯಾವ ಸ್ಪರ್ಧಿ ಗೆಲ್ಲುತ್ತಾರೆ, ಯಾವ ಸ್ಪರ್ಧಿ ಮನೆಗೆ ಹೋಗುತ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಪ್ರತಿ ವಾರವೂ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರತಿಕ್ರಿಯೆ ಬೇರೆ ಬೇರೆ ರೀತಿ ನಡೆಯುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋ ಕೊನೆ ಹಂತವನ್ನು ತಲುಪುತ್ತಿದೆ.
ಬಿಗ್ ಬಾಸ್ ಇಂದಿನ ಟಾಸ್ಕ್ನಲ್ಲಿ ಒಂದು ಸಂಖ್ಯೆಯನ್ನು ಸೂಚಿಸುತ್ತಾರೆ. ಆ ಸಂಖ್ಯೆಗೆ ಮೀಸಲಿರುವ ಚೆಂಡುಗಳನ್ನು ತೆಗೆದುಕೊಂಡು ಸ್ಪರ್ಧಿಗಳು ತಮ್ಮ ಟೀಮ್ನ ಬಾಸ್ಕೆಟ್ನಲ್ಲಿ ಹಾಕಬೇಕಾಗಿದೆ. ಒಂದು ತಂಡದಲ್ಲಿ ಮೂವರು ಎನ್ನುವಂತೆ 2 ಟೀಮ್ಗಳನ್ನು ರೆಡಿ ಮಾಡಿದ್ದು ಅವರ ಕಾಲಿಗೆ ಹಗ್ಗಗಳನ್ನು ಕಟ್ಟಲಾಗಿದೆ. ಈ ಗೇಮ್ ಆಡುವಾಗ ಭವ್ಯ ಅವರನ್ನು ಮಂಜು ತಳ್ಳಿದ್ದು ಇದಕ್ಕೆ ಭವ್ಯ ಕೋಪಗೊಂಡಿದ್ದಾರೆ.
ನೀವೇನಾದ್ರೂ ಕುರಿ ಸಾಕಾಣಿಕೆ ಮಾಡಿದ್ರೆ ತಿಂಗಳಿಗೆ 1 ಲಕ್ಷ ಆದಾಯ ಗಳಿಕೆ ಮಾಡಬಹುದು.! ಹೇಗೆ ಗೊತ್ತಾ..?
ಮೂಗಿಗೆ ಭವ್ಯ ಹೊಡೆದಿರುವುದನ್ನ ಮಂಜು ಪ್ರಶ್ನೆ ಮಾಡಿದ್ದಕ್ಕೆ ಬೇರೆಯವರಿಗೆ ಹೇಳುವುದಕ್ಕೂ ಮುಂಚೆ, ನೀವು ಮೊದಲು ಕರೆಕ್ಟ್ ಆಗಿ ಆಟ ಆಡಿ ಎಂದು ಗಟ್ಟಿ ಧ್ವನಿಯಲ್ಲೇ ಭವ್ಯ ಹೇಳಿದ್ದಾರೆ. ಇದಕ್ಕೆ ಮಂಜು ನನಗೆ ಜ್ಞಾನ ಇದೆ ರಜತ್ ಎಂದಿದ್ದಾರೆ.
ಮಂಜು ಎಲ್ಲರನ್ನು ಓವರ್ ಟೇಕ್ ಮಾಡಿ ಚೆಂಡುಗಳನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಕ್ಯಾಪ್ಟನ್ ರಜತ್ ನೀನು ಆಡುತ್ತಿರುವುದು ತಪ್ಪು ಎಂದು ಹೇಳಿದ್ದಾರೆ. ಎಲ್ಲ ಸ್ಪರ್ಧಿಗಳು ಚೆಂಡಿಗಾಗಿ ಒಬ್ಬರ ಮೇಲೆ ಒಬ್ಬರು ಬಿದ್ದು ಟಾಸ್ಕ್ ಪೂರ್ಣಗೊಳಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಈ ಟಾಸ್ಕ್ನಲ್ಲಿ ಚೆನ್ನಾಗಿ ಆಡಿದವರಿಗೆ ಫೈನಲ್ ಟಿಕೆಟ್ ಕನ್ಫರ್ಮ್ ಆಗಲಿದೆ. ಹೀಗಾಗಿ ಎಲ್ಲರೂ ಸಂಬಂಧಗಳನ್ನ ಪಕ್ಕಕ್ಕಿಟ್ಟು ಗೆಲುವು ಒಂದನ್ನೇ ಮುಂದೆ ನೋಡಬೇಕಿದೆ.
ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಕೊನೇ ಬಿಗ್ ಬಾಸ್ ಸೀಸನ್ ಇದು. ಆದ್ದರಿಂದ ವೀಕ್ಷಕರಿಗೆ ಇದು ತುಂಬ ವಿಶೇಷವಾದ ಸೀಸನ್. ಕಳೆದ ಸೀಸನ್ಗಿಂತಲೂ ಹೆಚ್ಚಿನ ಟಿಆರ್ಪಿ ಪಡೆದುಕೊಳ್ಳುವಲ್ಲಿ ಈ ಸೀಸನ್ ಯಶಸ್ವಿ ಆಗಿದೆ. ಕಳೆದ ವಾರ ಫ್ಯಾಮಿಲಿ ಸಂಚಿಕೆಗಳು ಪ್ರಸಾರ ಆದವು. ಎಲ್ಲರೂ ನಗುವಿನ ಅಲೆಯಲ್ಲಿ ತೇಲಿದ್ದರು. ಆದರೆ ಈ ವಾರ ಟಿಕೆಟ್ ಟು ಫಿನಾಲೆ ಟಾಸ್ಕ್ ನೀಡಿದ್ದರಿಂದ ಎಲ್ಲರ ಆಟದಲ್ಲಿ ಅಗ್ರೆಷನ್ ಜಾಸ್ತಿ ಆಗಿದೆ.