ತುಮಕೂರು:- ದೂರು ಕೊಡಲು ಬಂದ ಮಹಿಳೆ ಜೊತೆ ಕಚೇರಿಯಲ್ಲಿಯೇ ರಾಸಲೀಲೆ ನಡೆಸಿದ ಆರೋಪಿತ DYSP ರಾಮಚಂದ್ರಪ್ಪನನ್ನು 14 ದಿನ ನ್ಯಾಯಾಂಗ ಬಂಧನ ವಿಧಿಸಿ ಮಧುಗಿರಿ ಜೆಎಂಎಫ್ಸಿ ಕೋರ್ಟ್ ಇಂದು ಆದೇಶ ಹೊರಡಿಸಿದೆ.
ಫೋನ್ ನಲ್ಲಿರುವ ಕಾಂಟ್ಯಾಕ್ಟ್ ದಿಢೀರ್ ಡಿಲೀಟ್ ಆದ್ರೆ ಟೆನ್ಷನ್ ಬಿಡಿ: ಹೀಗೆ ಮಾಡಿ!
ಸೋಮವಾರದವರೆಗೂ ಮಧುಗಿರಿ ಜೈಲಿನಲ್ಲಿರುವ ಡಿವೈಎಸ್ ಪಿ ರಾಮಚಂದ್ರಪ್ಪ, ಆ ಬಳಿಕ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲು ಆದೇಶಿಸಲಾಗಿದೆ.
ಪಾವಗಡ ಮೂಲದ ಮಹಿಳೆಯೊಬ್ಬರು ತಮ್ಮ ಜಮೀನಿನ ವ್ಯಾಜ್ಯ ವಿಚಾರಕ್ಕೆ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪಗೆ ದೂರು ನೀಡಲು ಬಂದಿದ್ದರು. ಈ ವೇಳೆ ಡಿವೈಎಸ್ಪಿ ಆಕೆಯನ್ನ ಪುಸಲಾಯಿಸಿ ಕಚೇರಿಯಲ್ಲಿರುವ ಆ್ಯಂಟಿ ಚೇಂಬರ್ಗೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಕೃತ್ಯ ಮೊಬೈಲ್ಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.