ಹುಬ್ಬಳ್ಳಿ: ಹುಬ್ಬಳ್ಳಿಯ ಸಾಯಿನಗರದಲ್ಲಿ ಸಿಲಿಂಡರ್ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಜೀವ ಕಳೆದುಕೊಂಡವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿ ಇಂದು ಬೆಳಗಿನ ಜಾವ ಕಿಮ್ಸ್ ಆಸ್ಪತ್ರೆಯಲ್ಲಿ ಕಣ್ಮುಚ್ಚಿದ್ದಾರೆ. ಮಂಜುನಾಥ ವಾಗ್ಮೋಡೆ (22 ) ಮೃತ ಮಾಲಾಧಾರಿಯಾಗಿದ್ದು, ಮೃತ ಮಂಜುನಾಥ ಎರಡನೇ ವರ್ಷ ಡಿಪ್ಲೊಮಾ ಓದುತ್ತಿದ್ದರು.
Supreme Court Recruitment: ಸುಪ್ರೀಂ ಕೋರ್ಟ್ʼನಲ್ಲಿದೆ ಉದ್ಯೋಗಾವಕಾಶ! ಆಸಕ್ತರು ಇವತ್ತೇ ಅಪ್ಲೈ ಮಾಡಿ
ಎರಡನೇ ವರ್ಷ ಅಯ್ಯಪ್ಪ ವೃತ ಮಾಡಲು ಮಾಲೆ ಹಾಕಿದ್ದರು. ಇವತ್ತು ಒಂದೇ ದಿನ ಇಬ್ಬರು ಮಾಲಾಧಾರಿಗಳು ಮೃತಪಟ್ಟಿದ್ದಾರೆ. ತಡರಾತ್ರಿ ಶಂಕರ ಚವ್ಹಾಣ್ ಮೃತಪಟ್ಟರೆ, ಬೆಳಗ್ಗೆ ಮಂಜುನಾಥ ವಾಗ್ಮೋಡೆ ಮೃತಪಟ್ಟಿದ್ದಾರೆ. ಗಾಯಗೊಂಡ 9 ಜನರಲ್ಲಿ ಸದ್ಯಕ್ಕೆ ಆರು ಜನರು ಮೃತಪಟ್ಟಿದ್ದಾರೆ. ಇನ್ನುಳಿದ ಮೂರು ಜನರಿಗೆ ಚಿಕಿತ್ಸೆ ಮುಂದುವರೆದಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಇನ್ನೂ ಗಂಭೀರವಾಗಿದೆ. ಓರ್ವರಲ್ಲಿ ಚೇತರಿಕೆ ಕಂಡು ಬಂದಿದೆ.