ರಾಮನಗರ:- ವಿವಾಹಿತ ಮಹಿಳೆಗೆ ಸಾಲ ಕೊಡಿಸುವುದಾಗಿ ನಂಬಿಸಿ ಲಾಡ್ಜ್ ಗೆ ಕರೆದೊಯ್ದು ರೇಪ್ ಮಾಡಿದ ಪ್ರಕರಣದಲ್ಲಿ BJP ಮುಖಂಡನನ್ನು ಅರೆಸ್ಟ್ ಮಾಡಿದ್ದಾರೆ.
ಮಹಿಳೆ ನೀಡಿದ ಈ ದೂರಿನ ಮೇರೆಗೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸೂರನಹಳ್ಳಿಯ ಬಿಜೆಪಿ ಮುಖಂಡ ಚಲುವರಾಮು ಎನ್ನುವರನ್ನು ಸಾತನೂರು ಪೊಲೀಸರು ಬಂಧಿಸಿದ್ದಾರೆ.
ತನ್ನ ಗಂಡನ ಕಾಗದ ಪತ್ರ ಸರಿಪಡಿಸಲು ಹಣದ ಅವಶ್ಯಕತೆ ಇತ್ತು. ಆಗ ಸಾಲ ಕೊಡಿಸುವುದಾಗಿ ಚಲುವರಾಮು ಭರವಸೆ ನೀಡಿದ್ದರು. ಬಳಿಕ ಸಾಲ ಕೊಡುವವರು ಬರುತ್ತಿದ್ದಾರೆ ಬನ್ನಿ ಎಂದು ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದು, ಸಾಲ ಕೊಡುವವರ ಕಚೇರಿ ಇಲ್ಲೇ ಇದೆ ಎಂದು ಹೇಳಿದ್ದ. ಬಳಿಕ ಮತ್ತು ಬರಿಸಿ ಲಾಡ್ಜ್ನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ತಡೆಯೊಡ್ಡಿದ್ದಕ್ಕೆ ಕಪಾಳಕ್ಕೆ ಹೊಡೆದಿದ್ದಾಗಿ ಮಹಿಳೆ ದೂರಿದ್ದಾಳೆ.
ಅಲ್ಲದೇ ಬಳಿಕ ವಿಡಿಯೋ ಕಾಲ್ ಮಾಡಿ ನಗ್ನ ದೇಹ ತೋರಿಸುವಂತೆ ಬೆದರಿಕೆ ಹಾಕುತ್ತಿದ್ದ, ನಿನ್ನ ಖಾಸಗಿ ವಿಡಿಯೋ ಇದೆ. ಎಲ್ಲಾ ಕಡೆ ಹಾಕುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿ ಮಹಿಳೆ ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಮೇರೆಗೆ ಇದೀಗ ಸಾತನೂರು ಪೊಲೀಸರು, ಬಿಜೆಪಿ ಮುಖಂಡ ಚಲುವರಾಮು ಎನ್ನುವರನ್ನು ಬಂಧಿಸಿದ್ದಾರೆ.