ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಮೊಬೈಲ್ ಚಟವಾಗಿಬಿಟ್ಟಿದೆ. ಹಾಲು ಕುಡಿಯುವ ಮಕ್ಕಳ ಕೈಯಲ್ಲೂ ಮೊಬೈಲ್ ಬೇಕು. ಇಲ್ಲವಾದರೆ ಅವು ಆಹಾರ ಸೇವಿಸೋದಿಲ್ಲ. ಇನ್ನೂ ಯುವಕರ ಸ್ಥಿತಿಯಂತೂ ಮೊಬೈಲ್ ಕೈಯಲ್ಲಿಲ್ಲದೆ ಜೀವನವೇ ಇಲ್ಲ ಎನ್ನುವಂತಾಗಿಬಿಟ್ಟಿದೆ. ಬೆಳಗ್ಗೆ ಎದ್ದಾಗಲೂ ಮೊಬೈಲ್ ನೋಡುವುದು,
ಮಲಗುವಾಗುವಾಗಲೂ ಮೊಬೈಲ್ ಪಕ್ಕದಲ್ಲಿಟ್ಟು ಮಲಗುವುದು ರೂಢಿಯಾಗಿಬಿಟ್ಟಿದೆ. ಮಲಗುವ ಸ್ವಲ್ಪ ಸಮಯದ ಮುನ್ನವೇ ಮೊಬೈಲ್ ಅನ್ನು ದೂರ ಇಡಲೇಬೇಕು, ಆಗ ಮೆದುಳಿಗೆ ನಿದ್ರೆಯ ಸಂದೇಶ ರವಾನೆಯಾಗುತ್ತದೆ. ಮೊಬೈಲ್ ನೋಡುತ್ತಿದ್ದರೆ ಮೊಬೈಲ್ ಬೆಳಕು ನಿಮ್ಮ ಮೆದುಳನ್ನು ಜಾಗೃತರಾಗಿರುವಂತೆ ನೋಡಿಕೊಳ್ಳುತ್ತದೆ, ಇದರಿಂದ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ.
ಬಂಜೆತನದ ಅಪಾಯ
ಸ್ಮಾಟ್ಫೋನ್ ಮೆದುಳಿನಿಂದ ಲೈಂಗಿಕ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೊಬೈಲ್ ಫೋನ್ಗಳಿಂದ ಹೊರಹೊಮ್ಮುವ ವಿಕಿರಣವು ಸಂತಾನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅನೇಕ ವರದಿಗಳು ಎಚ್ಚರಿಸುತ್ತವೆ. ಇದು ವೀರ್ಯಾಣು ಸಂಖ್ಯೆಯನ್ನು ಕಡಿಮೆ ಮಾಡಬಹುದು. ತನ್ನ ಫೋನ್ ಅನ್ನು ಯಾವಾಗಲೂ ತನ್ನ ಜೇಬಿನಲ್ಲಿ ಇಟ್ಟುಕೊಳ್ಳುವವರ ವೀರ್ಯದ ಸಂಖ್ಯೆ ಕಡಿಮೆಯಾಗಬಹುದು ಆತ ತಂದೆಯಾಗಲು ಸಮಸ್ಯೆಯಾಗಬಹುದು.
ನಿದ್ರಾ ಭಂಗ
ಸ್ಮಾರ್ಟ್ ಫೋನ್ʼಗಳ ಬೆಳಕು ಮೆಲಟೋನಿನ್ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆ. ಈ ಮೂಲಕ ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಇದಲ್ಲದೇ, ಫೋನ್ ನೋಟಿಫಿಕೇಶನ್ ಮತ್ತು ಅಲರ್ಟ್ʼಗಳು ನಿದ್ರೆಗೆ ಭಂಗ ತರಬಹುದು.
ಸ್ಫೋಟಗೊಳ್ಳುವ ಅಪಾಯ
ಸ್ಮಾರ್ಟ್ಫೋನ್ ಅನ್ನು ದಿಂಬಿನ ಕೆಳಗೆ ಇಡುವುದರಿಂದ ಶಾಖದ ಶೇಖರಣೆಗೆ ಕಾರಣವಾಗಬಹುದು. ಇದು ಫೋನ್ ಹೆಚ್ಚು ಬಿಸಿಯಾಗಲು ಮತ್ತು ಸ್ಫೋಟಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ.
ಮಾನಸಿಕ ಒತ್ತಡ
ಸ್ಮಾರ್ಟ್ಫೋನ್ನ ನಿರಂತರ ಬಳಕೆಯು ಮಾನಸಿಕ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು. ರಾತ್ರಿ ವೇಳೆ ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ಮನಸ್ಸಿಗೆ ಸಂಪೂರ್ಣ ವಿಶ್ರಾಂತಿ ದೊರೆಯುವುದಿಲ್ಲ. ದಿನವಿಡೀ ಒತ್ತಡವನ್ನು ಅನುಭವಿಸಲು ಪ್ರಾರಂಭಿಸಬಹುದು.
ಆರೋಗ್ಯ ಸಮಸ್ಯೆಗಳು
ದೀರ್ಘಕಾಲದವರೆಗೆ ಸ್ಮಾರ್ಟ್ಫೋನ್ ಹತ್ತಿರ ಇರುವುದು ಕಣ್ಣಿನ ಕಿರಿಕಿರಿ, ತಲೆನೋವು ಮತ್ತು ಕಿವಿ ನೋವಿನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ರಾತ್ರಿಯಲ್ಲಿ ಸ್ಮಾರ್ಟ್ಫೋನ್ ಅನ್ನು ದೂರವಿಡುವುದು ನಿದ್ರೆಯನ್ನು ಸುಧಾರಿಸುವುದಲ್ಲದೆ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ನಿಮಗೆ ಮಧ್ಯೆರಾತ್ರಿ ಎಚ್ಚರವಾದರೆ ಒಂದೊಮ್ಮೆ ಮೊಬೈಲ್ ಅನ್ನು ಹತ್ತಿರವಿಟ್ಟುಕೊಂಡು ಮಲಗಿದಾಗ ಮಧ್ಯೆ ಎಲ್ಲಾದರೂ ಎಚ್ಚರವಾದರೆ ತಕ್ಷಣವೇ ಮೊಬೈಲ್ ತೆರೆದು ನೋಡುವ ಅಭ್ಯಾಸ. ಅದೇ ಮೊಬೈಲ್ ದೂರ ಇದ್ದರೆ ಹಾಗೆಯೇ ಮತ್ತೆ ನಿದ್ರೆ ಬಂದುಬಿಡುತ್ತದೆ. ವಾಸ್ತವವಾಗಿ, ಹೆಚ್ಚಿನ ಜನರು ರಾತ್ರಿಯಿಡೀ ಹಲವಾರು ಬಾರಿ ಎಚ್ಚರಗೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಮತ್ತೆ ಮಲಗಲು ಪ್ರಯತ್ನಿಸಿದಾಗ, ಫೋನ್ ನೋಡುತ್ತಾರೆ, ಫೋನ್ ಬೆಳಕು ನಿಮ್ಮ ಮೆದುಳು ಮತ್ತು ದೇಹವನ್ನು ನಿದ್ರೆಯಿಂದ ದೂರವಿಡುತ್ತದೆ, ಮೆದುಳು ಎಚ್ಚರವಾಗಿರುವಂತೆ ಮಾಡುತ್ತದೆ. ಇದರಿಂದ ನಿಮ್ಮ ನಿದ್ದೆ ಮಾಯವಾಗುತ್ತದೆ.