ಗಣಿಜಿಲ್ಲೆ ಬಳ್ಳಾರಿಯ ಸಿರುಗುಪ್ಪದಲ್ಲಿ ಲಕ್ಕಿ ಡಿಪ್ ಹೆಸರಲ್ಲಿ ಸಾರ್ವಜನಿಕರಿಂದ ಹಣ ಪಡೆದು, ಚಂದಾದರರಿಗೆ ವಂಚಿಸಿರುವ ಘಟನೆ ನಡೆದಿದೆ. ಕೂಲಿ ನಾಲಿ ಮಾಡಿ ಏನೋ ಒಂದು ಸಾಮಾನು ಸಿಗುತ್ತೆ ಎಂದು ಹಣ ಜಮಾವಣೆ ಮಾಡಿ ಅದೃಷ್ಟ ಪರೀಕ್ಷೆಗಿಳಿದಿದ್ದ ಚಂದಾದರರಿಗೆ ಮಕ್ಮಲ್ ಟೋಪಿ ಹಾಕಿ ಏಸ್ಕೇಪ್ ಆಗಿ ಜನರಿಗೆ ಪಂಗನಾಮ ಹಾಕಿದ್ದರೇ .ಆಗಾದ್ರೇ ಏನಿದು ಸ್ಕೀಮ್, ಯಾರ ಇದ್ದಕ್ಕೆ ಹೊಣೆ…. ಜನರನ್ನು ಯಾವ ರೀತಿ ಯಾಮಾರಿಸಿದ್ರು ಎನ್ನುವುದ್ರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೇ ನೋಡಿ.
ಗಣಿ ಜಿಲ್ಲೆಯ ಭತ್ತದ ನಾಡು ಎಂದು ಹೆಸರಾಗಿರುವ ಸಿರುಗುಪ್ಪದಲ್ಲಿ ಲಕ್ಕಿ ಡೀಪ್ ಹೆಸರಿನಲ್ಲಿ ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ. ಶ್ರೀ ದಿವ್ಯಜ್ಯೋತಿ ಲಕ್ಕಿ ಸ್ಕೀಮ್ ಹೆಸರಿನ ಮೂಲಕ ಗ್ರಾಹಕರನ್ನು ನಂಬಿಸಿದ ವಿನೋದ್ ಎನ್ನುವ ವ್ಯಕ್ತಿಯು ನಾಲ್ಕು ಜನರ ತಂಡವನ್ನು ಕಟ್ಟಿಕೊಂಡು ಈ ಸ್ಕೀಮ್ ಪ್ರಾರಂಭಿಸಿದ್ದಾನೆ.ನಂತರ ಈ ಲಕ್ಕಿ ಡಿಪ್ ಚೀಟಿಯ ಸದಸ್ಯತ್ವ ನೊಂದಾಣಿ ಮಾಡಿಸಲು ಮತ್ತು ಸಾರ್ವಜನಿಕರನ್ನು ಸೆಳೆಯಲು ಸುಮಾರು 38 ಜನ ಏಜಂಟರ್ಗಳನ್ನು ನೇಮಿಸಿಕೊಂಡಿದ್ದಾರೆ. ಅವರಿಗೆ ಪ್ರತಿ ಕಾರ್ಡ್ ಗೆ ಇಂತಿಷ್ಟು ಕಮೀಷನ್ ಎಂದು ಫಿಕ್ಸ್ ಮಾಡಿ ಗೇಮ್ ಸ್ಟಾರ್ಟ್ ಮಾಡಿದ್ದಾನೆ.
ಹೋಟೆಲ್ ಗೆ ಕರೆಸಿ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಪ್ರಿಯತಮೆ..! ಮುಂದೇನಾಯ್ತು..?
ಈ ಲಕ್ಕಿ ಸ್ಕೀಮ್ ನಿಂದಾಗಿ ನಮಗೂ ಅಷ್ಟೋ..ಇಷ್ಟೋ ದುಡಿಮೆ ಆಗುತ್ತೆ ಎಂದು ನಂಬಿದ ಏಜೆಂಟರ್ಗಳು, ಹಗಲು ರಾತ್ರಿ ಎನ್ನದೇ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸಂಚರಿಸಿದ್ದಾರೆ. ಸಾರ್ವಜನಿಕರಿಗೆ ಸ್ಕೀಮ್ ಬಗ್ಗೆ ಪ್ರತಿ ಹಂತದಲ್ಲಿ ಡಿಪ್ ನಲ್ಲಿ ಬಂದಿರುವ ಹೆಸರಿನವರಿಗೆ ಗಿಫ್ಟ್ ಸಿಗುತ್ತೆ. ಪ್ರತಿ ಕಾರ್ಡ್ನವರು 18 ತಿಂಗಳ ಅವಧಿಯಲ್ಲಿ 16800 ರೂ. ಕಟ್ಟಬೇಕು. 12 ತಿಂಗಳು 900 ರೂ, ಹಾಗೇ ಇನ್ನುಳಿದ 6 ತಿಂಗಳು 1000 ರೂ ಅಂತೆ ಹಣ ಪಾವತಿಸಬೇಕು.ಒಂದು ವೇಳೆ ಏನು ಬರದೇ ಇದ್ರೇ ಗಿಫ್ಟ್ ಕೊಡುತ್ತೆವೆ ಎಂದು ನಂಬಿಸಿದ್ದಾರೆ.
ಇವರ ನಯವಂಚನೆಯ ಮಾತುಗಳನ್ನು ನಂಬಿಸಿ ಸಾರ್ವಜನಿಕರು ಹಣ ಪಡೆದು, ಸುಮಾರು 700 ರಿಂದ 800 ಜನರಿಂದ ಚಂದಾದರಿಕೆಯನ್ನು ಮಾಡಿಸಿದ್ದಾರೆ. ಇದರ ಒಟ್ಟು ಮೊತ್ತ ಸರಿಸುಮಾರು 2 ಕೋಟಿ ಎಂದು ಅಂದಾಜಿಸಲಾಗಿದೆ. ಇದನ್ನೆಲ್ಲ ಗ್ರಹಿಸಿದ ಮೇನ್ ಕಿಂಗ್ ಪಿನ್ ವಿನೋದ್ ಮತ್ತು ಸಂಗಡಿಗರು ಚಂದಾದರರಿಗೆ ಡೀಪ್ ಎತ್ತಿದ ಪ್ರಕಾರ ಗಿಫ್ಟ್ ರೂಪದಲ್ಲಿ ಸಾಮಾಗ್ರಿಗಳನ್ನು ನೀಡದೇ ರಾತ್ರೋರಾತ್ರಿ ಆಫೀಸ್ ಕ್ಲೋಸ್ ಮಾಡಿಕೊಂಡು, ಮೊಬೈಲ್ ಪೋನ್ ಸ್ವೀಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾರೆ.
ಮೇನ್ ಕಿಂಗ್ ಪೀನ್ ವಿನೋದ್ ಮತ್ತು ಶಿವರಾಜ್ ಅವರ ಆಟವೂ ಕೇಲ್ ಕತಮ್- ದುಖನ್ ಬಂದ್ ಎನ್ನುವ ಪರಿಸ್ಥಿತಿಗೆ ಬಂದಿರುವುದು ಈ ಸ್ಕೀಮ್ ಗೆ ಗ್ರಾಹಕರನ್ನು ಸೆಳೆದ ಸುಮಾರು 38 ಏಜಂಟರ್ಗಳಿಗೆ ತಿಳಿದಿದೆ, ಇದ್ರಿಂದ ಭಯಭೀತರಾಗಿದ್ದಾರೆ.ಇನ್ನು ಹೊರಗೆ ವಿಷಯ ಬಂದಂತೆ
ಗ್ರಾಹಕರು ಮತ್ತು ಏಜಂಟರ್ಗಳ ನಡುವೇ ಪ್ರತಿ ದಿನವು ಜಗಳ ಗಲಾಟೆಯಾಗುತ್ತಿತ್ತು.ಕೊನೆಗೆ ಎಲ್ಲರೂ ಸೇರಿ ಸಿರುಗುಪ್ಪ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಹೇಗಾದ್ರೂ ಮಾಡಿ ಈ ವಂಚಕರನ್ನು ಹಿಡಿದು ತನ್ನಿ, ನಮ್ಮ ಹಣವನ್ನು ವಾಪಸ್ ಮಾಡಿಸಿ ಎಂದು ಏಜಂಟರ್ಗಳು ಮತ್ತು ಚಂದಾದಾರರು ಪೋಲೀಸರ ಬಳಿ ಅಂಗಲಾಚುತ್ತಿದ್ದಾರೆ. ಜಿಎಸ್ಟಿ ನಂಬರ್ ಇಲ್ಲ….ಟ್ರೇಡ್ ಮಾರ್ಕ್ ಲೈಸನ್ಸ್ ಇಲ್ಲ ….ಆದ್ರೇ ಜನರು ಇಂತವರನ್ನು ಹೇಗೆ ನಂಬುತ್ತಾರೆ ಎನ್ನುವುದು ಯಕ್ಷ ಪ್ರಶ್ನೇಯಾಗಿ ಉಳಿದಿದೆ.