ಹುಬ್ಬಳ್ಳಿ: ದೇಶ ಕಂಡ ಶ್ರೇಷ್ಠ ತಜ್ಞ ಸಜ್ಜನ ರಾಜಕಾರಣಿ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ನಿಧನ ಎಲ್ಲರಿಗೂ ಆಘಾತ ತಂದಿದೆ ಎಂದುಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಳವಳ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಇಡೀ ದೇಶ ದುಃಖದಲ್ಲಿ ಮುಳುಗಿದ್ದು ಒಬ್ಬ ವ್ಯಕ್ತಿ ಇಲ್ಲದೇ ಇರುವಾಗ ಅವರ ಮಹತ್ವ ಗೊತ್ತಾಗುತ್ತದೆ ಅವರು ಮಾಡಿ ಕಾರ್ಯ ಗೊತ್ತಾಗುತ್ತದೆ. ಮನಮೋಹನ್ ಸಿಂಗ್ ಒಬ್ಬ ಸಾಮಾನ್ಯ ರಾಜಕಾರಣಿ ಆಗಿರಲಿಲ್ಲ.
ಅವರು ಪ್ರೋಪೇಷರ್ ಆಗಿ ವರ್ಲ್ಡ್ ಬ್ಯಾಂಕ್ ನಲ್ಲಿ ಕೆಲಸ ಮಾಡಿ ಓರ್ವ ಆರ್ಥಿಕ ತಜ್ಞರಾಗಿ ಕೆಲಸ ಮಾಡಿದವರು. ಅಂದಿನ ಪ್ರಧಾನ ಮಂತ್ರಿ ನರಸಿಂಹ ರಾವ್ ಅವರನ್ನ ಆರ್ಥಿಕ ಮಂತ್ರಿ ಮಾಡಿದವರು.ಇವರ ಬಗ್ಗೆ ಒಂದು ಮಾತು ಹೇಳಿದರೆ ತಪ್ಪಾಗಲಾರದು ಅಂದಿನ ಆರ್ಥಿಕ ಸಚಿವ ಮನಮೋಹನ್ ಸಿಂಗ್ ಅವರಿಗೆ ಆಗಲಿ ಪ್ರಧಾನ ಮಂತ್ರಿ ನರಸಿಂಹ ಅವರಿಗೆ ಆಗಲಿ ಯಾವುದೇ ರಾಜಕೀಯ ಒತ್ತಡ ಇರಲಿಲ್ಲ.
ಹೋಟೆಲ್ ಗೆ ಕರೆಸಿ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಪ್ರಿಯತಮೆ..! ಮುಂದೇನಾಯ್ತು..?
ಇದೇ ರೀತಿ ಆಡಳಿತ ಮಾಡಬೇಕು ಎಂಬ ಒತ್ತಡ ಮಾಡಬೇಕು ಇವರಿಗೆ ಒಳ್ಳೆಯ ಅವಕಾಶ ಇತ್ತು. ಇದ್ದ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಅವಕಾಶ ಒದಗಿ ಬಂದಿತು. ಸಾಮಾನ್ಯವಾಗಿ ನಾವು ಯಾರನ್ನ ಆಕಸ್ಮಿಕವಾಗಿ ಇರುವ ನಾಯಕರನ್ನ ಬಿಂಬಿಸುತ್ತೇವೆ ಅವರನ್ನ ಅಸಾಧಾರಣವಾದ ಕೆಲಸ ಆಗಿತ್ತೆವೆ ಏಕೆಂದರೆ ಯಾವುದೇ ಕಟ್ಟು ಪಾಡು ಅವರಿಗೆ ಇರಲ್ಲ. ಜಾಗತೀಕರಣ ಉದಾರೀಕರಣ ಅಂದಿನ ದಿನಗಳಲ್ಲಿ ಮಾಡಿದ್ದಿಂದ ವಿದೇಶಿ ಬಂಡವಾಳ ಹೆಚ್ಚಾಯಿತು. ಐಎಂಎಫ್ ಆರ್ಥಿಕ ಸಹಾಯ ಸಹ ಸಿಕ್ಕಿತು ರಾಜಕೀಯ ದಿವಾಳಿತನವಾಗುವುದನ್ನ ತಡೆದರು. ಎಲ್ಲಾ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಆದವು ಎಂದರು