ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಪೋಲೀಸ್ ಠಾಣೆ ಆವರಣದಲ್ಲಿ ನಡೆದ
ಸಮಾರಂಭ. ಪಿಎಸ್ಐ ಶಾಂತಾ ಹಳ್ಳಿ ಮಾತನಾಡಿ . ಬನಹಟ್ಟಿ ಪೋಲೀಸ್ ಠಾಣೆಯ ಕರ್ತವ್ಯದ ವಾಹನ ೨೦ ವರ್ಷಗಳಿಗೂ ಹೆಚ್ಚಿನ ಕಾಲ ಸೇವೆಯಲ್ಲಿದ್ದ ಕಾರಣ ನಿಯಮದಡಿ ಗುಜರಿ ವಸ್ತುವಾಗಿತ್ತು. ಕಳೆದೆರಡು ತಿಂಗಳಿಂದ ಕಾನೂನು ಸುವ್ಯವಸ್ಥೆ ಪರಿಪಾಲನೆ, ಕಚೇರಿ ಸುತ್ತಾಟ ಮತ್ತು ನಾಗರಿಕ ರಕ್ಷಣೆ ವಿಷಯದಲ್ಲಿ ತುಂಬ ತೊಂದರೆಯಾಗುತ್ತಿತ್ತು.
ಕರ್ನಾಟಕ ಜನರ ತೆರಿಗೆ ಹಣ ಬಳಸಿಕೊಂಡು ಕಾಂಗ್ರೆಸ್ ಮಹಾಧಿವೇಶನ: ವಿಜಯೇಂದ್ರ!
ಹಳೆಯ ವಾಹನದಿಂದ ಏನಾದರೂ ಅವಘಡ ಸಂಭವಿಸಿದರೆ ಎಂಬ ಭಯದಿಂದ ಅಲೆದಾಡಬೇಕಿತ್ತು. ಕೇವಲ ಎರಡು ತಿಂಗಳ ಹಿಂದೆ ಸಮಾರಂಭದಲ್ಲಿ ವಾಹನವನ್ನು ಖುದ್ದಾಗಿ ಕಂಡ ಉಮಾಶ್ರೀ ಮೇಡಂ ತಕ್ಷಣ ತಮ್ಮ ಅನುದಾನದಲ್ಲಿ ನಮ್ಮ ಠಾಣೆಗೆ ಹೊಸ ವಾಹನದ ಅನುದಾನ ನೀಡಿ, ಇಂದು ಕರ್ತವ್ಯಕ್ಕೆ ಸೇರ್ಪಡೆಗೊಳಿಸಿದ್ದು, ನಮಗೆಲ್ಲ ಸಂತಸ ತಂದಿದೆ ಎಂದು ಬನಹಟ್ಟಿ ಪಿಎಸ್ಐ ಶಾಂತಾ ಹಳ್ಳಿ ಶಾಸಕಿ ಉಮಾಶ್ರೀಯವರಿಗೆ ಅಭಿನಂದಿಸಿದರು.
ಸಿಪಿಐ ಸಂಜೀವ ಬಳಿಗಾರ ಮಾತನಾಡಿ ಇಲಾಖೆಯ ಬೇಡಿಕೆಗೆ ತಕ್ಷಣ ಸ್ಪಂದಿಸುವ ಮೂಲಕ ಶಾಸಕಿ ಉಮಾಶ್ರೀ ಮೇಡಂ ನಮ್ಮ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಬೇಕಾದ ಸಹಾಯ- ಸೌಲಭ್ಯ ಕಲ್ಪಿಸಲು ನೆರವಾಗುವುದಾಗಿ ನೀಡಿದ ಭರವಸೆಯಿಂದ ಸಿಬ್ಬಂದಿ ಸಂತಸಗೊಂಡಿದ್ದಾರೆ.
ತೇರದಾಳ ಪೋಲೀಸ್ಠಾಣೆಯ ವಾಹನವೂ ಹಳೆಯದಾಗಿರುವ ಕಾರಣ ಅದಕ್ಕೂ ಸರ್ಕಾರದ ಮಟ್ಟದಲ್ಲಿ ಯತ್ನಿಸಿ ನೆರವಾಗಲು ಮನವಿ ಮಾಡಿದರು.
ಶಾಸಕಿ ಉಮಾಶ್ರೀ ಮಾತನಾಡಿ:
ಸಾಮಾಜಿಕ ದುಷ್ಟ ಶಕ್ತಿಗಳ ನಿಗ್ರಹಕ್ಕೆ, ಕಾನೂನು ಸುವ್ಯವಸ್ಥೆ ಕಾಪಾಡಲು, ನಾಗರಿಕರ ರಕ್ಷಣೆಗೆ ಮತ್ತು ಕೋಮು ಸಂಘರ್ಷಗಳಾಗದಂತೆ ಮುನ್ನೆಚ್ಛರಿಕೆ ತೆಗೆದುಕೊಂಡು ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಠಾಣೆಯಲ್ಲಿ ಯಾವುದೇ ವಿಧದ ತಂತ್ರಜ್ಞಾನಗಳ ಅಳವಡಿಕೆಯಾಗಲಿ, ಅಗತ್ಯ ಸೌಲಭ್ಯಗಳಾಗಲಿ ಬೇಕಾದಲ್ಲಿ ನ್ನ ಸಹಕಾರ ನಿರಂತರವಾಗಿರುತ್ತದೆ. ತೇರದಾಳ ಮತಕ್ಷೇತ್ರದಲ್ಲಿ ಒಳ್ಳೆಯ ಅಧಿಕಾರಿಗಳಿದ್ದು, ಯಾವುದೇ ಲೋಪವಿಲ್ಲದೇ ಮತ್ತು ಸಾರ್ವಜನಿಕ ಜನಜೀವನಕ್ಕೆ ಧಕ್ಕೆಯಾಗದಂತೆ ಜಾಗೃತೆಯಾಗಿ ಕೆಲಸ ನಿರ್ವಹಿಸುತ್ತಿರುವುದು ಹೆಮ್ಮೆಯಾಗಿದ್ದು, ಇಲಾಖೆಯ ಅಗತ್ಯತೆಗಳ ಪೂರೈಸಲು ಸರ್ಕಾರದ ಗಮನ ಸೆಳೆದು ಪೂರೈಸುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ರಾಜೇಂದ್ರ ಭದ್ರನ್ನವರ, ಚಿದಾನಂದ ಗಾಳಿ, ಸಂಜೀವ ಜೋತಾವರ, ಬಸವರಾಜ ಗುಡೋಡಗಿ, ರಾಹುಲ ಕಲಾಲ, ದಾನಪ್ಪ ಹುಲಜತ್ತಿ, ದುಂಡಪ್ಪ ಕರಿಗಾರ, ತೇರದಾಳ ಠಾಣಾಧಿಕಾರಿ ಅಪ್ಪು ಐಗಳಿ ಮತ್ತು ಎಲ್ಲ ಸಿಬ್ಬಂದಿ ಇದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ