ಹಾಸನ:- ಸತ್ತ ಕೋಳಿಯ ಬಾಯಿಯಿಂದ ನಿಗೂಢವಾಗಿ ಬೆಂಕಿ ಹೊರಹೊಮ್ಮುತ್ತಿದ್ದು, ಇದು ಹದಿಗೆ ಗ್ರಾಮಸ್ಥರಿಗೆ ಆಶ್ಚರ್ಯ ಉಂಟು ಮಾಡಿದೆ. ಜಿಲ್ಲೆಯ ಸಕಲೇಶಪುರ ತಾಲೂಕಿನ ಸಮೀಪದ ಹದಿಗೆ ಗ್ರಾಮದಲ್ಲಿ ಈ ದೃಶ್ಯ ಕಂಡು ಬಂದಿದೆ.
ಡಿಸೆಂಬರ್ ೨೯ರಿಂದ ಜ.೧೪ರ ವರೆಗೆ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ವಿವಿಧ ಕಾರ್ಯಕ್ರಮ!
ಗ್ರಾಮದ ರವಿ ಎಂಬುವವರಿಗೆ ಸೇರಿದ ಕೋಳಿಗಳು ಸಾವನ್ನಪ್ಪಿವೆ. ಕೋಳಿ ಸಾಕಾಣಿಕೆಯನ್ನು ಸಹಿಸದ ಕೆಲ ಕಿಡಿಗೇಡಿಗಳು, ಕೂಲಿ ಕೆಲಸಕ್ಕೆ ಹೋಗಿ ಬರುವಷ್ಟರಲ್ಲಿ ರಾಸಾಯನಿಕ ವಿಷವಿಟ್ಟು ಸಾಯಿಸಿರುವುದಾಗಿ ಆರೋಪ ಕೇಳಿಬಂದಿದೆ. ಹೀಗೆ ಸತ್ತ ಕೋಳಿಯ ಹೊಟ್ಟೆ ಭಾಗದಲ್ಲಿ ಜೋರಾಗಿ ಅದುವಿದಾಗ ಬೆಂಕಿ ಉಗುಳುತ್ತಿವೆ.
ಹದಿಗೆ ಗ್ರಾಮದ ಜನರು ಕೋಳಿ ಸಾಕಾಣಿಕೆಯನ್ನು ಉಪ ಕಸುಬು ಮಾಡಿಕೊಂಡಿದ್ದಾರೆ. ಆದರೆ ಇದನ್ನು ಸಹಿಸದ ಕೆಲವರು ಕೋಳಿಗಳು ಮರಣ ಹೊಂದುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.