ಬೆಂಗಳೂರು:- ಮುನಿರತ್ನ ಮೇಲೆ ಮೊಟ್ಟೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಮಂಜುನಾಥ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಇದ್ದಕ್ಕಿದ್ದಂತೆ ನನ್ನ ತಲೆ ಮೇಲೆ ಜೋರಾದ ಪೆಟ್ಟು ಬಿತ್ತು. ತಲೆಯಲ್ಲಿ ಉರಿ ಆಯ್ತು, ಕೂದಲು ಕೂಡ ಕಿತ್ತು ಬಂತು. ತಲೆ ಸುತ್ತು ಮತ್ತು ವಾಂತಿ ಬಂದಂತೆ ಆಗ್ತಿದೆ ಎಂದು ಶಾಸಕ ಮುನಿರತ್ನ ಅವರು ಹೇಳಿದ್ದಾರೆಂದು ತಿಳಿಸಿದರು.
ಯಾವಾಗ್ಲು ಅಷ್ಟೆ, ತಲೆಗೆ ಪೆಟ್ಟು ಬಿದ್ದಂತಹ ಸಂದರ್ಭದಲ್ಲಿ ವಾಂತಿ ಬಂದಂತಾದರೆ ಸಿ.ಟಿ ಸ್ಕ್ಯಾನ್ ಮಾಡಿಸಬೇಕಾಗುತ್ತದೆ. ಅಕಸ್ಮಾತ್ ಮಿದುಳು ಒಳಗಡೆ ಏನಾದರು ತೊಂದರೆ ಆಗಿದ್ಯಾ ಅನ್ನೋದನ್ನು ತಿಳಿದುಕೊಳ್ಳಬೇಕಾಗುತ್ತದೆ. ವೈದ್ಯರ ಜೊತೆ ಮಾತನಾಡಿದ್ದೇನೆ. ಅವರು ವೈದ್ಯಕೀಯ ಪರೀಕ್ಷೆ ಮಾಡ್ತಾರೆ. ತಲೆಗೆ ಪೆಟ್ಟು ಬಿದ್ದ ಜಾಗದಲ್ಲಿ ಸ್ವಲ್ಪ ಕೂದಲು ಬರ್ನಿಂಗ್ ಆಗಿದೆ ಎಂದು ತಿಳಿಸಿದರು.