ಕೋಲಾರ :- ಜಿಲ್ಲೆಯ ಕೆಜಿಎಫ್ ತಾಲೂಕಿನ ಕಮ್ಮಸಂದ್ರದಲ್ಲಿ ಗಂಡ ಹಾಗೂ ಅವರ ಮನೆಯವರ ಕಿರುಕುಳದಿಂದ ಬೇಸತ್ತು ತನ್ನ ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾಯಿ ಕೂಡ ನೇಣಿಗೆ ಶರಣಾದ ಘಟನೆ ಜರುಗಿದೆ.
ಸರಣಿ ಅಪಘಾತ: ಟೆಂಪೋ ಟ್ರಾವೆಲರ್ ಟೈಯರ್ ಬ್ಲಾಸ್ಟ್ ಆಗಿ ಮೂವರು ದುರ್ಮರಣ!
7 ವರ್ಷದ ಮೌನೀಶ್, 4 ವರ್ಷದ ನಿತಿನ್, ತಾಯಿ 30 ವರ್ಷದ ತಿಪ್ಪಮ್ಮ ಮೃತರು ಎನ್ನಲಾಗಿದೆ. ಪತಿ ಮಣಿ ಕುಡಿದು ಬಂದು ನಿತ್ಯ ಗಲಾಟೆ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಬೆಮೆಲ್ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತಿಪ್ಪಮ್ಮ ಪತಿ ಮಣಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬೆಳ್ಳಂಬೆಳಿಗ್ಗೆ ಕಮ್ಮಸಂದ್ರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದು ಹೋಗಿದೆ. ತನ್ನ ತಾಯಿಯೇ ತಾನು ಹೆತ್ತು ಬೆಳೆಸಿದ್ದ ಮಕ್ಕಳನ್ನು ಕೊಂದು ತಾನು ಕೂಡ ನೇಣಿಗೆ ಶರಣಾಗಿದ್ದಾಳೆ.
ಇನ್ನು ಈ ವಿಷಯ ತಿಳಿದು ಬೆಮೆಲ್ ನಗರ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ, ಅಲ್ಲದೆ ಸ್ಥಳಕ್ಕೆ ಕೆಜಿಎಫ್ ಎಸ್ಪಿ ಶಾಂತರಾಜು, ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.