ಐತಿಹಾಸಿಕ ಸಿಗಂದೂರು ಸೇತುವೆ ನಿರ್ಮಾಣ ಕಾರ್ಯಗಳು ಬಹುತೇಕ ಮುಕ್ತಾಯ ಹಂತಕ್ಕೆ ತಲುಪಿದ್ದು, ಇದೀಗ ಸಂಸದ ಬಿ ವೈ ರಾಘವೇಂದ್ರರವರು ಸೇತುವೆಯ ಡ್ರೋನ್ ವಿಡಿಯೋವನ್ನ ರಿಲೀಸ್ ಮಾಡಿದ್ದಾರೆ. ಅದರ ಕೆಲವು ಮನೋಹರ ಅದರ ದೃಶ್ಯಗಳು ನೋಡುಗರ ಕಣ್ಸಳೆಯುತ್ತಿದೆ. ಈ ಹಿಂದೆ ಸಂಸದ ಬಿ ವೈ ರಾಘವೇಂದ್ರರವರು ಸಿಗಂದೂರು ಸೇತುವೆಯ ಡ್ರೋನ್ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ರೈತರೇ ನಿಮಗೆ ಗೊತ್ತೆ..? ಮೇಕೆ ಸಾಕಾಣಿಕೆಯಿಂದ ನೀವು ಪ್ರತಿ ವರ್ಷ ಲಕ್ಷಗಟ್ಟಲೆ ಗಳಿಸಬಹುದು!
ಇದೀಗ ಆ ಸೇತುವೆಯ ಪೂರ್ಣ ಪ್ರಮಾಣದ ಡ್ರೋನ್ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮುಕ್ತಾಯ ಹಂತಕ್ಕೆ ತಲುಪಿದ ಐತಿಹಾಸಿಕ ಸಿಗಂದೂರು ಸೇತುವೆಯ ಮನಮೋಹಕ ದೃಶ್ಯ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ. ಆ ವಿಡಿಯೋಗೆ ಮ್ಯೂಸಿಕ್ ಹಾಕಿ ಎಡಿಟ್ ಮಾಡಿದ್ದಾರೆ. ಆ ಮ್ಯೂಸಿಕ್ನಲ್ಲಿ ಮೂಡಿಬಂದ ಡ್ರೋನ್ ವಿಡಿಯೋ ನೋಡುಗರಿಗೆ ವಿಭಿನ್ನವಾದ ಫೀಲ್ ನೀಡುತ್ತಿದೆ.
ಸುಮಾರು 2.13 ಕಿ.ಮೀ ಉದ್ದದವಿರುವ ಈ ಸೇತುವೆ, ದೇಶದ 7ನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆ ಅಂತಾ ಕರೆಸಿಕೊಳ್ಳಲಿದೆ. ಸೇತುವೆ ಉದ್ಘಾಟನೆಯ ಬಗ್ಗೆ ಇತ್ತೀಚೆಗೆಷ್ಟೆ ಸಂಸದ ಬಿವೈ ರಾಘವೇಂದ್ರ ರವರು ಮಾತನಾಡಿದ್ದರು. ಸಿಗಂದೂರು ಸೇತುವೆ ಕಾಮಗಾರಿ 2025ರ ಮೇ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.