ಬಹುಭಾಷಾ ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ಗೋವಾದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಬಾಲ್ಯ ಸ್ನೇಹಿತ ಆಂಟೋನಿ ಕೈ ಹಿಡಿದ ಕೀರ್ತಿ ಸುರೇಶ್ ತಮ್ಮ ಮದುವೆಗೆ ಕೇಲವ ಆಪ್ತರಿಗಷ್ಟೇ ಆಹ್ವಾನ ನೀಡಿದ್ದರು. ಕೀರ್ತಿ ಸುರೇಶ್ ಮದುವೆಯಲ್ಲಿ ಆಕೆಯ ಪ್ರಾಣ ಸ್ನೇಹಿತೆ ಕನ್ನಡದ ನಟಿ ಸೋನು ಗೌಡ ಕೂಡ ಭಾಗಿಯಾಗಿದ್ದರು. ಮದುವೆಯಲ್ಲಿ ಭಾಗಿಯಾದ ಸುಂದರ ಫೋಟೋವೊಂದನ್ನು ನಟಿ ಹಂಚಿಕೊಂಡಿದ್ದಾರೆ.
ಎರಡು ಸುಂದರ ಹೃದಯಗಳು ಒಟ್ಟಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗುವುದು ತುಂಬಾ ಖುಷಿಯ ವಿಚಾರ. ಈ ಸುಂದರ ದಂಪತಿಗೆ ಮತ್ತೊಮ್ಮೆ ಹ್ಯಾಪಿ ಮ್ಯಾರೀಡ್ ಲೈಫ್, ನಿಮ್ಮ ಜೀವನ ಸುಂದರವಾಗಿರಲಿ ಎಂದು ನಟಿ ಸೋನು ಶುಭಹಾರೈಸಿದ್ದಾರೆ. ಮದುವೆಯಲ್ಲಿ ಕೀರ್ತಿ ದಂಪತಿ ಜೊತೆ ತೆಗೆದ ಸುಂದರ ಫೋಟೋವನ್ನು ನಟಿ ಶೇರ್ ಮಾಡಿದ್ದಾರೆ.
ಈ ಹಿಂದೆಯೇ ಸಂದರ್ಶನವೊಂದರಲ್ಲಿ ಕೀರ್ತಿ ಜೊತೆಗಿನ ಸ್ನೇಹದ ಬಗ್ಗೆ ಸೋನು ಮಾತನಾಡಿದ್ದರು. ಕಾಮನ್ ಫ್ರೆಂಡ್ ಮೂಲಕ ಕೀರ್ತಿ ಸುರೇಶ್ ಪರಿಚಯವಾಗಿದ್ದು, ಇದೀಗ ಸೋನು ಅವರಿಗೂ ಕೀರ್ತಿ ಬೆಸ್ಟ್ ಫ್ರೆಂಡ್ ಆಗಿದ್ದಾರೆ. ನಾವು ಫೋನ್ನಲ್ಲೂ ಮಾತನಾಡುತ್ತೇವೆ, ಆದರೆ ಸಿನಿಮಾ ಬಗ್ಗೆ ಮಾತನಾಡೋದಿಲ್ಲ, ಕೀರ್ತಿ ಅವರು ಆಹಾರ ಪ್ರಿಯೆ. ಹಾಗಾಗಿ ಆಹಾರದ ವಿಚಾರವಾಗಿ ಹೆಚ್ಚಾಗಿ ಮಾತನಾಡುತ್ತೇವೆ ಎಂದಿದ್ದರು ಸೋನು. ಹಾಗಾಗಿ ನಟಿಯ ಮದುವೆಯಲ್ಲಿ ಸೋನುಗೆ ವಿಶೇಷವಾಗಿ ಆಹ್ವಾನ ನೀಡಲಾಗಿತ್ತು.
ಇನ್ನೂ ಡಿ.12ರಂದು ಗೋವಾದಲ್ಲಿ ಆಂಟೋನಿ ತಟ್ಟಿಲ್ ಜೊತೆ ಕೀರ್ತಿ ಮದುವೆಯಾದರು. ಈ ಮದುವೆಯಲ್ಲಿ ದಳಪತಿ ವಿಜಯ್, ತ್ರಿಷಾ, ಜವಾನ್ ಡೈರೆಕ್ಟರ್ ಅಟ್ಲಿ ದಂಪತಿ, ಕಲ್ಯಾಣಿ ಪ್ರಿಯಾದರ್ಶನ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದರು.