ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಜೆ ಕೆ ಪೇಂಟ್ಸ್ ಕಾರ್ಖಾನೆ ಮುಂಭಾಗ ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಓರ್ವ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಮನೋಜ್ ( 19) ಮೃತ ದುರ್ದೈವಿಯಾಗಿದ್ದು, ಮತ್ತೊಬ್ಬ ಯುವಕನಿಗೆ ಗಾಯಗಳಾಗಿವೆ. ಗೀತಂ ಯೂನಿವರ್ಸಿಟಿಯಲ್ಲಿ ಮೊದಲ ವರ್ಷದ ಬಿಟೆಕ್ ವ್ಯಾಸಂಗ ಮಾಡುತ್ತಿದ್ದ ವಿಧ್ಯಾರ್ಥಿಯಾಗಿದ್ದನು.
ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 20 ಲಕ್ಷ ರೂವರೆಗೂ ಸಾಲ! ಕೇಂದ್ರ ಸರ್ಕಾರದ ಈ ಯೋಜನೆಯಿಂದ ಸಿಗುತ್ತೆ ಭರ್ಜರಿ ಲಾಭ!
ಇಂದು ರಜೆ ಹಿನ್ನಲೆ ಸ್ನೇಹಿತನ ಜೊತೆ ಹೊರಗಡೆ ಬಂದಿದ್ದನು. ಈ ವೇಳೆ ಖಾಸಗಿ ಬಸ್ ಮತ್ತು ದ್ವಿಚಕ್ರದ ನಡುವೆ ಅಪಘಾತ ಸಂಭವಿಸಿದೆ. ಇನ್ನೂ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತ ವಿಧ್ಯಾರ್ಥಿ ಶವವನ್ನು ದೊಡ್ಡಬಳ್ಳಾಪುರ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.