ತುಮಕೂರು: ಸೋಡಿಯಂ ಬಾಂಬ್ ಸ್ಪೋಟಿಸಿ ಎಡವಟ್ಟು ಮಾಡಿಕೊಂಡಿದ್ದ ಡ್ರೋಣ್ ಪ್ರತಾಪ್ 8 ದಿನಗಳ ಸೆರೆಮನೆ ವಾಸ ಅಂತ್ಯವಾಗಿದೆ..ಕೊನೆಗೂ ಮಧುಗಿರಿ ಉಪಕಾರಾಗೃಹದಿಂದ ಬಿಡುಗಡೆಗೊಂಡಿದ್ದಾನೆ..ಬಿಡುಗಡೆ ಬಳಿಕ ಪೊಲೀಸರ ವಿರುದ್ದ ಅಸಮಾಧಾನ ಹೊರಹಾಕಿದ ಪ್ರತಾಪ ತನಗೆ ನ್ಯಾಯ ಬೇಕು ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾನೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಸೋಡಿಯಂ ಬಾಂಬ್ ಸ್ಪೋಟಿಸಿ ಡ್ರೋಣ್ ಪ್ರತಾಪ್ ಎಡವಟ್ಟು ಮಾಡಿಕೊಂಡಿದ್ದ..ಸ್ಪೋಟಕ ವಸ್ತು ನಿಯಂತ್ರಣ ಕಾಯಿದೆ ಅಡಿಯಲ್ಲಿ ಮಿಡಿಗೇಶಿ ಪೊಲೀಸರು ಪ್ರತಾಪ್ ನನ್ನು ಬಂಧಿಸಿದ್ರು..ಮಧುಗಿರಿ ಜೆಎಮ್ ಎಫ್ ಸಿ ನ್ಯಾಯಾಲಯ 10 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿತ್ತು.
ಈ ನಡುವೆ ಪ್ರತಾಪ್ ಜಾಮೀನು ಅರ್ಜಿ ಹಾಕಿಕೊಂಡಿದ್ದ..ನಾಲ್ಕನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ನಿನ್ನೆ ದಿನ ಜಾಮೀನು ಮಂಜೂರು ಮಾಡಿತ್ತು..ಆದರೆ ಜಾಮೀನು ಪ್ರಕ್ರಿಯೆ ಇಂದು ಸಂಜೆ ವೇಳೆಗೆ ಅಂತ್ಯಗೊಂಡಿತ್ತು. ಹಾಗಾಗಿ 5-30 ರ ವೇಳೆಗೆ ಮಧುಗಿರಿ ಉಪಕಾರಾಗೃಹದಿಂದ ಪ್ರತಾಪ್ ಬಿಡುಗಡೆಗೊಂಡಿದ್ದಾನೆ.
Merry Christmas 2024: ಕ್ರಿಸ್ಮಸ್ ಹಬ್ಬದ ಇತಿಹಾಸ ತಿಳಿದಿದೆಯಾ..? ಯೇಸು ಕ್ರಿಸ್ತನ ಜನನದ ಬಗ್ಗೆ ಇಲ್ಲಿದೆ ಮಾಹಿತಿ
ಬಿಡುಗಡೆ ಬಳಿಕ ಡ್ರೋಣ್ ಪ್ರತಾಪ್ ತನ್ನ ವಿರುದ್ದ ಕ್ರಮ ಕೈಗೊಂಡ ಪೊಲೀಸರ ವಿರುದ್ದ ಅಸಮಾಧಾನ ಹೊರಹಾಕಿದ್ದಾನೆ..ದೇಶದಲ್ಲಿ ಹಲವಾರು ಯೂಟ್ಯೂಬರ್ ಈ ರೀತಿಯ ಪ್ರಯೋಗ ಮಾಡಿದ್ದಾರೆ. ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ.ಅವರ್ಯಾರ ಮೇಲೆನೂ ಕ್ರಮ ಕೈಗೊಂಡಿಲ್ಲ. ನನ್ನನ್ನು ಮಾತ್ರ ಟಾರ್ಗೆಟ್ ಮಾಡಿದ್ದು ಸರಿ ಅಲ್ಲ. ನಾನು ಮಾಡಿರೋದು ಎಜುಕೇಷನಲ್ ವೀಡಿಯೋ.ಅದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ. ನನಗೆ ಆದ ಅನ್ಯಾಯದ ವಿರುದ್ಧ ನ್ಯಾಯ ಬೇಕು ನ್ಯಾಯ ಬೇಕು ಎಂದು ಅಳಲು ತೋಡಿಕೊಂಡಿದ್ದಾನೆ.
ಈ ನಡುವೆ ಪ್ರತಾಪ್ ವಿರುದ್ದ ಆದ ಎಫ್ ಐ ಆರ್ ರದ್ದು ಮಾಡುವಂತೆ ಹೈ ಕೋರ್ಟ ಮೊರೆಹೋಗಿದ್ದಾರೆ..ಎಫ್ ಐ ಆರ್ ರದ್ದಾದ ಬಳಿಕ ಪೊಲೀಸರ ವಿರುದ್ದನೂ ಕೌಂಟರ್ ಕೇಸ್ ಹಾಕಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ..ಏನೊ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡು ಜೈಲು ವಾಸಿಯಾಗಿದ್ದ ಡ್ರೋನ್ ಪ್ರತಾಪ್ ಕೊನೆಗೂ ಜೈಲುವಾಸದಿಂದ ಮುಕ್ತಗೊಂಡಿದ್ದಾನೆ..