ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದು ಬೀಗಲು ತಯಾರಿ ನಡೆಸಿರೋ ಟೀಮ್ ಇಂಡಿಯಾಗೆ ನಾಯಕನೇ ದೊಡ್ಡ ತಲೆನೋವಾಗಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ ಆಟ ಸದ್ಯ ಮ್ಯಾನೇಜ್ಮೆಂಟ್ ತಲೆ ಕೆಡಿಸಿದೆ.
ಬಾಣಂತಿಯರಲ್ಲಿ ಮತ್ತೊಂದು ಸಮಸ್ಯೆ: ವೈದ್ಯರೇ ಗಾಬರಿ ಆಗುತ್ತಿರುವುದೇಕೆ? ಆತಂಕಕಾರಿ ಮಾಹಿತಿ ಇಲ್ಲಿದೆ!
3 ಇನ್ನಿಂಗ್ಸ್. 19 ರನ್. 6.33ರ ಎವರೇಜ್. ಇದು ವಿಶ್ವ ಕ್ರಿಕೆಟ್ ಲೋಕದ ಒನ್ ಆಫ್ ದ ಬೆಸ್ಟ್ ಬ್ಯಾಟ್ಸ್ಮನ್, ಟೀಮ್ ಇಂಡಿಯಾ ನಾಯಕ, ಹಿಟ್ಮ್ಯಾನ್ ಎಂದೇ ಕರೆಸಿಕೊಳ್ಳೋ ರೋಹಿತ್ ಶರ್ಮಾರ ಸಾಧನೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಪಾಲಿಗೆ ವಿಲನ್ ಆಗ್ತಾರೆ ಅಂದ್ಕೊಂಡಿದ್ದ ರೋಹಿತ್ ಇದೀಗ ಟೀಮ್ ಇಂಡಿಯಾಗೆ ವಿಲನ್ ಆಗಿದ್ದಾರೆ. ಆಡಿದ ಎರಡೂ ಪಂದ್ಯಗಳಲ್ಲಿ ಫ್ಲಾಪ್ ಶೋ ನೀಡಿ ತಂಡಕ್ಕೆ ಹೊರೆಯಾಗಿದ್ದಾರೆ.
ಆಸಿಸ್ ಪ್ರವಾಸ ಮಾತ್ರವಲ್ಲ. ಇದಕ್ಕೂ ಮುನ್ನ ತವರಿನಲ್ಲಿ ನಡೆದ ನ್ಯೂಜಿಲೆಂಡ್, ಬಾಂಗ್ಲಾದೇಶ ಎದುರಿನ ಸರಣಿಗಳಲ್ಲೂ ವೈಫಲ್ಯ ಅನುಭವಿಸಿದ್ರು. ಬಾಕ್ಸಿಂಗ್ ಡೇ ಕದನದಲ್ಲಿ ರೋಹಿತ್ ಶರ್ಮಾ ಕಮ್ಬ್ಯಾಕ್ ಮಾಡ್ತಾರೆ ಅನ್ನೋ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆ ನಿರೀಕ್ಷೆ ಪಂದ್ಯಕ್ಕೂ ಮುನ್ನವೇ ಹುಸಿಯಾಗಿದೆ. ಅಭ್ಯಾಸದ ಕಣದಲ್ಲೇ ಹಿಟ್ಮ್ಯಾನ್ ಪರದಾಟ ಶುರುಮಾಡಿದ್ದಾರೆ.
ಜಸ್ಪ್ರಿತ್ ಬೂಮ್ರಾ, ಸಿರಾಜ್ ಅಥವಾ ಜಡೇಜಾ ಅಲ್ಲ. ಅನಾನುಭವಿ, ದೇಶಿ ಕ್ರಿಕೆಟ್ನಲ್ಲೂ ಬೌಲಿಂಗ್ ಮಾಡದ ಪಡಿಕ್ಕಲ್ಗೆ ರೋಹಿತ್ ಶರ್ಮಾ ಕ್ಲೀನ್ ಕ್ಲೀನ್ಬೋಲ್ಡ್ ಆಗಿರೋದು. ಒಂದು ಸಣ್ಣ ಕ್ಲೂ ಕೂಡ ಸಿಗದ ರೀತಿಯಲ್ಲಿ ರೋಹಿತ್ ಶರ್ಮಾ, ಪಡಿಕ್ಕಲ್ ಬೌಲಿಂಗ್ನಲ್ಲಿ ಔಟಾಗಿದ್ದಾರೆ. ಈ ಔಟಾದ ರೀತಿ ರೋಹಿತ್ ಯುಗಾಂತ್ಯದ ಸೂಚನೆ ನೀಡ್ತಿದೆ.