ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಸಂಭವಿಸುತ್ತಿರುವ ಬಾಣಂತಿಯರ ಸಾವು ಪ್ರಕರಣ ರಾಜ್ಯದ ಜನತೆಯನ್ನೇ ಅಕ್ಷರಶಃ ಬೆಚ್ಚಿ ಬೀಳಿಸಿದೆ.
ಆಸ್ಪತ್ರೆಗೆ ಕರೆದುಕೊಂಡು ಹೋಗೋಕು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಇದೀಗ ಮತ್ತೊಂದು ಆತಂಕ ಪಡುವ ಮಾಹಿತಿ ಹೊರ ಬಿದ್ದಿದೆ. ಇದೀಗ ಬಾಣಂತಿಯರಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸದೊಂದು ಸಮಸ್ಯೆ ಆರೋಗ್ಯ ಇಲಾಖೆಗೆ ಆತಂಕ ತಂದಿಟ್ಟಿದೆ.
ವಾಹನ ಸವಾರರಿಗೆ ಗುಡ್ ನ್ಯೂಸ್: ಟ್ರಾಫಿಕ್ ನಿಯಂತ್ರಣಕ್ಕೆ ಪಾಲಿಕೆ ಹೊಸ ಪ್ಲಾನ್!
ಇತ್ತೀಚೆಗೆ ಡಿಲಿವರಿಯಾಗುವ ಬಾಣಂತಿಯರ ಪೈಕಿ ಹೆಚ್ಚಿನವರಲ್ಲಿ ಅತಿಯಾದ ರಕ್ತಸ್ರಾವ ಕಾಣಿಸಿಕೊಳ್ಳಲು ಶುರುವಾಗಿದೆ. ಇದೇ ಕಾರಣದಿಂದ ಸೋಮವಾರ ಕೂಡಾ ಒಬ್ಬ ಬಾಣಂತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲೇ ನಡೆದಿದೆ. ಬಾಣಂತಿಗೆ ಹೆಚ್ಚು ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಆದರೆ ಯಾಕೆ ರಕ್ತಸ್ರಾವ ಆಯಿತು ಎಂಬುದು ಮಾತ್ರ ತಿಳಿದಿಲ್ಲ. ಆಸ್ಪತ್ರೆಗೆ ಬರುವ 10 ಬಾಣಂತಿಯರಲ್ಲಿ 4-5 ಜನರಲ್ಲಿ ಈ ಸಮಸ್ಯೆ ಮುಖ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಆದರೆ, ಅತಿಯಾದ ರಕ್ತಸ್ರಾವ ಯಾಕೆ ಆಗುತ್ತಿದೆ ಎಂಬುದಕ್ಕೆ ಕಾರಣ ಯಾರಿಗೂ ತಿಳಿಯುತ್ತಿಲ್ಲ. ವೈದ್ಯರಿಗೆ ಇದು ದೊಡ್ಡ ಪ್ರಶ್ನೆಯಾಗಿ ಪರಿಣಮಿಸಿದೆ.
ರಕ್ತಸ್ರಾವವಾಗುತ್ತಿರುವುದು ಅನೇಕ ಬಾಣಂತಿಯರಿಗೆ ಮೊದಲಿಗೆ ಅರಿವಿಗೆ ಬರುತ್ತಿಲ್ಲ ಎನ್ನಲಾಗಿದೆ. ಮೊದಲೇ ತಿಳಿದರೆ ಇದಕ್ಕೆ ಸೂಕ್ತ ಚಿಕಿತ್ಸೆ ನೀಡಬಹುದು. ಆದರೆ ಅನೇಕರಿಗೆ ತೀವ್ರ ರಕ್ತಸ್ರಾವವಾಗಿ ಅಂತಿಮ ಹಂತಕ್ಕೆ ಬಂದಾಗಲೇ ಗೊತ್ತಾಗುತ್ತಿದೆ. ಇದರಿಂದ ತುರ್ತು ಚಿಕಿತ್ಸೆ ನೀಡಿದರೂ ದೇಹದಲ್ಲಿ ರಕ್ತ , ಹಿಮೋಗ್ಲೋಬಿನ್ನ ಪ್ರಮಾಣ ಕಡಿಮೆಯಾಗುವ ಕಾರಣದಿಂದ ಅನೇಕರು ಪ್ರಾಣತೆತುವಂತಾಗಿದೆ. ಹೀಗಾಗಿ ರಕ್ತಸ್ರಾವ ಸಮಸ್ಯೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ
ರಸಕ್ತಸ್ರಾವ ವಿಚಾರವಾಗಿ ಬಾಣಂತಿಯರು, ಅವರ ಕಡೆಯವರು ಕೂಡ ಬಹಳಷ್ಟು ಎಚ್ಚರಿಕೆ ವಹಿಸಬೇಕು. ಅಲ್ಲದೆ, ಈ ರೀತಿಯ ಸಮಸ್ಯೆ ಎದುರಾದರೆ ಕೂಡಲೇ ಚಿಕಿತ್ಸೆ ಪಡೆಯಬೇಕು ಎಂದು ವಾಣಿ ವಿಲಾಸ್ ಆಸ್ಪತ್ರೆ ವೈದ್ಯೆ ಡಾ. ಶರಧಿನಿ ಸಲಹೆ ನೀಡಿದ್ದಾರೆ.