ಬೆಳಗಾವಿ:- ಬೆಳಗಾವಿಯಲ್ಲಿ ಹಾಡಹಗಲೇ 24 ಬಾರಿ ಕೊಚ್ಚಿ ಕೊಲೆ ಮಾಡಲು ಯತ್ನ ನಡೆದಿದ್ದು, ಸಂತ್ರಸ್ತ ಬದುಕುಳಿದಿದ್ದೇ ಪವಾಡ ಎನ್ನಬಹುದು. ಈ ದೃಶ್ಯ ಕಂಡು ಬೆಳಗಾವಿ ಮಂದಿ ಆತಂಕಗೊಂಡಿದ್ದರು.
ಅನೈತಿಕ ಸಂಬಂಧ ಆರೋಪ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಹಾಡಹಗಲೇ ಕುಡುಗೋಲಿನಿಂದ 24 ಬಾರಿ ಕೊಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ನಡೆದಿದೆ. ಅರವಳ್ಳಿ ಗ್ರಾಮದ ಮಕ್ತುಮ್ ತಟಗಾರ್ ಹಲ್ಲೆಗೊಳಗಾದ ವ್ಯಕ್ತಿ. ಮುತ್ತು ಗಣಾಚಾರಿ ಹಲ್ಲೆ ಮಾಡಿದ ಆರೋಪಿ ಎನ್ನಲಾಗಿದೆ.
ಮುತ್ತು ಗಣಾಚಾರಿ ಪತ್ನಿಯನ್ನು ಮಕ್ತುಮ್ ತಟಗಾರ್ ಈ ಹಿಂದೆ ಪ್ರೀತಿಸ್ತಿದ್ದನಂತೆ. ಮದುವೆ ಬಳಿಕವೂ ಗಣಾಚಾರಿ ಪತ್ನಿಯ ಜೊತೆ ಮಕ್ತುಮ್ ಸಂಪರ್ಕದಲ್ಲಿ ಇದ್ದನಂತೆ. ಈ ವಿಷಯ ಮುತ್ತು ಗಣಾಚಾರಿಗೆ ಗೊತ್ತಾಗಿದೆ. ಈ ವಿಚಾರವಾಗಿ ಮುತ್ತು ಗಣಾಚಾರಿ ಮತ್ತು ಆತನ ಪತ್ನಿಯ ನಡುವೆ ಗಲಾಟೆಯಾಗಿದೆ. ಪತಿ ಮುತ್ತು ಗಣಾಚಾರಿಯನ್ನು ಬಿಟ್ಟಯ ಪತ್ನಿ ತವರು ಮನೆ ಸೇರಿದ್ದಾಳೆ.
ಇದನ್ನೇ ಮುಂದಿಟ್ಟುಕೊಂಡು ಮುಕ್ತುಮ್, ಮುತ್ತು ಗಣಾಚಾರಿಗೆ ರೇಗಿಸುತ್ತಿದ್ದನಂತೆ. ಇದರಿಂದ ಮುತ್ತು ಗಣಾಚಾರಿ ಆಕ್ರೋಶಗೊಂಡು, ಸಂತೆಗೆ ಬಂದಿದ್ದ ಮುಕ್ತುಮ್ ತಟಗಾರ್ ಮೇಲೆ ಕುಡುಗೋಲು ಬೀಸಿದ್ದಾನೆ. ಕೆಳಗೆ ಬೀಳುತ್ತಿದ್ದಂತೆ ಬರೋಬ್ಬರಿ 24 ಬಾರಿ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಮಕ್ತುಮ್ ತಟಗಾರ್ನನ್ನು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.