ಬೆಂಗಳೂರು:- ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಹೊಸ ವರ್ಷದಿಂದ ಎರಡು ಹೊಸ ರೈಲು ಸೇರ್ಪಡೆ ಆಗಲಿದೆ.
ಮೆಟ್ರೋ 21 ಹೊಸ ರೈಲುಗಳ ಖರೀದಿಗೆ ಆರ್ಡರ್ ಮಾಡಿದ್ದು, ಮೊದಲ ಹಂತದಲ್ಲಿ ಜನವರಿ 10 ರಂದು ಮೊದಲ ರೈಲು ಪೀಣ್ಯ ಡಿಪೋ ತಲುಪಲಿದೆ. ನಂತರ ಪ್ರತಿ ಒಂದು, ಎರಡು ತಿಂಗಳಿಗೆ ಒಂದೊಂದು ರೈಲುಗಳು ಸೇರ್ಪಡೆ ಆಗಲಿದೆ ಎಂದು ಬಿಎಂಆರ್ಸಿಎಲ್ ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ತಿಳಿಸಿದ್ದಾರೆ.
ಕ್ರಿಸ್ ಮಸ್ ಟ್ರೀ ಆಚರಣೆ ಆರಂಭವಾದದ್ದು ಹೇಗೆ? ಏನಿದರ ಮಹತ್ವ? ಇಲ್ಲಿದೆ ಡೀಟೈಲ್ಸ್!
ನಮ್ಮ ಮೆಟ್ರೋ ಹಸಿರು ಮತ್ತು ನೇರಳೆ ಎರಡು ಮಾರ್ಗದಲ್ಲಿ ಪ್ರತಿದಿನ 9 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಸದ್ಯ ಹಸಿರು ಮಾರ್ಗದಲ್ಲಿ 22 ರೈಲುಗಳು, ನೇರಳೆ ಮಾರ್ಗದಲ್ಲಿ 32 ರೈಲುಗಳು ಕಾರ್ಯಾಚರಣೆ ಮಾಡುತ್ತಿದ್ದರೆ, ಸ್ಪೇರ್ ಆಗಿ 3 ರೈಲುಗಳಿವೆ. ಒಟ್ಟು ಎರಡು ಮಾರ್ಗದಲ್ಲಿ 57 ರೈಲುಗಳಿವೆ. ಆದರೆ ರೈಲಿನಲ್ಲಿ ಪ್ರಯಾಣಿಕರಿಗೆ ಜಾಗ ಸಾಲುತ್ತಿಲ್ಲ. ಕಾಲಿಡಲು ಜಾಗವಿಲ್ಲದಷ್ಟು ರಷ್ ಆಗುತ್ತಿವೆ. ಇದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಬಿಎಂಆರ್ಸಿಎಲ್ ಈ ಕ್ರಮದಿಂದ ಹಸಿರು ಮತ್ತು ನೇರಳೆ ಮಾರ್ಗದ ಪ್ರಯಾಣಿಕರಿಗೆ ತುಂಬಾ ಸಹಾಯ ಆಗಲಿದೆ.
ಇತ್ತ ಬಹು ನಿರೀಕ್ಷಿತ ಆರ್ವಿ ರೋಡ್- ಬೊಮ್ಮಸಂದ್ರ ಹಳದಿ ಮಾರ್ಗದ ಮೆಟ್ರೋ ಮಾರ್ಗದಲ್ಲಿ ಸದ್ಯ ಒಂದು ಚಾಲಕರಹಿತ ರೈಲಿದ್ದು, ಹೊಸ ವರ್ಷಕ್ಕೆ ಅಂದರೆ ಜನವರಿ 15 ಕ್ಕೆ ಚೀನಾದಿಂದ ನಮ್ಮ ಮೆಟ್ರೋಗೆ ಎರಡನೇ ರೈಲು ಬರಲಿದೆ.
ಟಿಆರ್ಎಸ್ಎಸ್ಎಲ್ ಕಂಪನಿ ಕಳಿಳುಹಿಸುತ್ತಿರುವ ರೈಲು ಜ.15 ಕ್ಕೆ ಹೆಬ್ಬಗೋಡಿ ಡಿಪೋ ತಲುಪಲಿದೆ. 2023 ಫೆಬ್ರವರಿಯಿಂದ ಚೀನಾದಿಂದ ಬಂದಿರುವ ಒಂದು ಚಾಲಕ ರಹಿತ ಪ್ರೋಟೋಟೈಪ್ ರೈಲಿನ ತಪಾಸಣೆ ಈಗಾಗಲೇ ನಡೆಯುತ್ತಿದೆ.
ಬಿಎಂಆರ್ಸಿಎಲ್ ಹಾಗೂ ರೈಲ್ವೆ ಮಂಡಳಿಯ ಒಪ್ಪಿಗೆ ಪಡೆದು 15 ನಿಮಿಷಕ್ಕೊಂದರಂತೆ ರೈಲು ಕಾರ್ಯಚರಣೆ ಮಾಡಲಿದೆ. ಈ ಮಾರ್ಗಕ್ಕೆ ಒಟ್ಟು 13 ರೈಲುಗಳನ್ನು ಆರ್ಡರ್ ಮಾಡಲಾಗಿದ್ದು, ಸದ್ಯ ಒಂದು ರೈಲಿದ್ದು ಜನವರಿಯಲ್ಲಿ ಮತ್ತೊಂದು ರೈಲು ಬರಲಿದೆ.
ಮಿಕ್ಕ 11 ರೈಲು ಪ್ರತಿ ಒಂದು ಅಥವಾ ಎರಡು ತಿಂಗಳಿಗೊಂದರಂತೆ ಬರಲಿವೆ.