ಕ್ರೈಸ್ತ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಈ ಕ್ರಿಸ್ ಮಸ್ ಕೂಡ ಒಂದು. ಈ ಹಬ್ಬವನ್ನು ವಿಶ್ವದಾದ್ಯಂತ ಡಿಸೆಂಬರ್ 25 ರಂದು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ, ಡಿಸೆಂಬರ್ 25ರಂದು ಆಚರಿಸುವ ಈ ಹಬ್ಬದ ಸಂಭ್ರಮವು ಡಿಸೆಂಬರ್ 24ರ ರಾತ್ರಿಯಿಂದಲೇ ಆರಂಭಗೊಳ್ಳುವುದು ವಿಶೇಷ. ಸರಿಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಬೆತ್ಲಹೆಮ್ ನಗರದ, ಹಸುವಿನ ಕೊಟ್ಟಿಗೆಯಲ್ಲಿ ಯೇಸುವು ಮೇರಿ ಮಗನಾಗಿ ಜನಿಸಿದರು. ಯೇಸು ಜನಿಸಿದ ದಿನವನ್ನು ಕ್ರಿಸ್ಮಸ್ ಹಬ್ಬವಾಗಿ ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಕ್ರಿಶ್ಚಿಯನ್ ಧರ್ಮಿಯರು ಮಾತ್ರವಲ್ಲದೇ ಪ್ರಪಂಚದಾದ್ಯಂತ ಎಲ್ಲಾ ಜನರು ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವುದು ವಿಶೇಷ.
ಕ್ರಿಸ್ಮಸ್ ಹಬ್ಬದಲ್ಲಿ ಅಲಂಕಾರಿಕ ವಸ್ತುಗಳು, ಕೇಕ್ ಹಾಗೂ ಇನ್ನಿತರ ಸಿಹಿ ತಿಂಡಿಗಳು, ಕ್ರಿಸ್ಮಸ್ ಟ್ರೀ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತದೆ. ಈ ಹಬ್ಬದಲ್ಲಿ ಮುಖ್ಯವಾಗಿ ಆಕರ್ಷಣೆಗೊಳಪಡುವ ಕ್ರಿಸ್ಮಸ್ ಟ್ರೀಯ ಮಹತ್ವ ಹಾಗೂ ಇತಿಹಾಸ ಇಲ್ಲಿದೆ.
ಇಂಜಿನ್ನಲ್ಲಿ ಶಾರ್ಟ್ ಸರ್ಕ್ಯೂರ್ಟ್: ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ಲಾರಿ!
ಒಂದು ದಂತ ಕಥೆಯ ಪ್ರಕಾರ, ಒಮ್ಮೆ ಥರ್ದೇವರಿಗೆ ಮುಗ್ಧ ಮಗುವನ್ನು ಬಲಿಕೊಡಬೇಕೆಂದು ಗ್ರಾಮದ ಜನರೆಲ್ಲರೂ ನಿರ್ಧಾರ ಮಾಡಿ ಒಂದೇ ಸ್ಥಳದಲ್ಲಿ ಎಲ್ಲರನ್ನೂ ಒಗ್ಗೂಡಿಸಿದ್ದರು. ಇದನ್ನು ನೋಡಿದ ಇಂಗ್ಲಿಷ್ ಸಂನ್ಯಾಸಿ ಸಂತ ಬೋನಿಫೇಸ್ ಮಗುವನ್ನು ರಕ್ಷಿಸಲು ಮರವೊಂದು ಕೆಳಗೆ ಬೀಳುವಂತೆ ಮಾಡುತ್ತಾನೆ. ಆಗ ಆ ಸ್ಥಳದಲ್ಲಿ ಒಂದು ಸಣ್ಣ ಮರವೊಂದು ಬೆಳೆಯುತ್ತದೆ.
ಆ ಸಂತನ ಪ್ರಕಾರ ಅದೇ ಮರ ಕ್ರಿಸ್ತನ ಶಾಶ್ವತತೆಯನ್ನು ಸಂಕೇತಿಸುತ್ತದೆ ಮತ್ತು ಅದನ್ನು ‘ ಟ್ರೀ ಆಫ್ ಲೈಫ್’ ಎಂದು ಕರೆಯಲಾಗುತ್ತದೆ. ಬದುಕಿನ ಸಂಕೇತವಾಗಿ ಮರವನ್ನು ಹಿಂದಿನಿಂದಲೂ ಆಭರಣ ಮತ್ತು ದೀಪಗಳಿಂದ ಅಲಂಕರಿಸಲಾಗುತ್ತದೆ. ಇದನ್ನು ಬದುಕಿನ ಸಕಾರಾತ್ಮಕ ಮನೋಭಾವದ ಸಂಕೇತವಾಗಿ ಪೂಜಿಸಲಾಗುತ್ತದೆ. ಹೊಸ ವರ್ಷದ ಮುನ್ನುಡಿ ಬರೆಯುವ ಈ ಹಬ್ಬ ಸಂಭ್ರಮ, ಸಂತೋಷದ ಜೊತೆಗೆ ಎಲ್ಲೆಡೆ ಶಾಂತಿಯನ್ನು ಪಸರಿಸಲಿ ಎಂಬ ಸದಾಶಯದೊಂದಿಗೆ ಎಲ್ಲರೂ ಸೇರಿ ಈ ಭಗವಂತನಲ್ಲಿ ಪ್ರಾರ್ಥನೆ ಮಾಡಿ ನವವರ್ಷವನ್ನು ಬರಮಾಡಿಕೊಳ್ಳೋಣ.
ಕ್ರಿಸ್ಮಸ್ ಟ್ರೀಯನ್ನು ಶಾಶ್ವತ ಜೀವನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಂಪ್ರದಾಯವು ಮೊದಲು ಜರ್ಮನಿಯಲ್ಲಿ ಪ್ರಾರಂಭವಾಯಿತು ಎಂದು ನಂಬಲಾಗಿದೆ. ನಂತರ ಅದು 1830ರ ದಶಕದಲ್ಲಿ ಇಂಗ್ಲೆಂಡ್ಗೆ ಪಸರಿಸಿತು. ದಂತಕಥೆಯ ಪ್ರಕಾರ ಚಳಿಗಾಲದಲ್ಲಿ ಯೇಸು ಕ್ರಿಸ್ತನ ಜನನದ ನಂತರ, ಹಿಮದಿಂದ ಕೂಡಿದ್ದ ಮರಗಳು ಹಸಿರು ಬಣ್ಣಕ್ಕೆ ತಿರುಗಿದವು. ಹೀಗಾಗಿ ಕ್ರಿಸ್ಮಸ್ ಟ್ರೀಯನ್ನು ಶಾಶ್ವತತೆ ಹಾಗೂ ಧನಾತ್ಮಕತೆಗೆ ಹೋಲಿಸಲಾಗುತ್ತದೆ.
ಕ್ರಿಸ್ಮಸ್ ಟ್ರೀ ವಾತಾವರಣದಲ್ಲಿ ಉಲ್ಲಾಸ, ಸಕಾರಾತ್ಮಕತೆ ಮತ್ತು ಚೈತನ್ಯವನ್ನು ತರುತ್ತದೆ ಎಂದು ನಂಬಲಾಗಿದೆ. ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಹಸಿರು ಬಿಟ್ಟುಕೊಡದೇ ಉಳಿಸುವ ಮನೋಭಾವನೆ ಕ್ರಿಸ್ಮಸ್ ಟ್ರೀ ಹೊಂದಿದೆ. ಈ ನಿತ್ಯಹರಿದ್ವರ್ಣ ಮರದಿಂದ ಹೊರಹೊಮ್ಮುವ ಸಿಹಿ ಸುವಾಸನೆಯು ದೈನಂದಿನ ಒತ್ತಡದಿಂದ ನಿಮ್ಮನ್ನು ವಿಶ್ರಾಂತಿಯಾಗಿರಿಸಲು ಸಹಾಯ ಮಾಡುತ್ತದೆ.
ಆರಂಭದ ದಿನಗಳಲ್ಲಿ ಕ್ರಿಸ್ಮಸ್ ಟ್ರೀ ಟ್ರೀಗೆ ಜಿಂಜರ್ ಬ್ರೆಡ್, ಸೇಬು ಮುಂತಾದ ಆಹಾರ ಪದಾರ್ಥಗಳಿಂದ ಅಲಂಕಾರ ಮಾಡುತ್ತಿದ್ದರು. ಆದರೆ ಕಾಲಾನಂತರದಲ್ಲಿ ಸಂಪ್ರದಾಯಗಳು ವಿಕಸನಗೊಂಡು ಈಗ ವಿದ್ಯುತ್ ದೀಪಗಳು, ಮಿಠಾಯಿಗಳು, ಮಿನುಗುವ ನಕ್ಷತ್ರಗಳು, ಹಲವು ಬಣ್ಣದ ಕಾಗದಗಳಿಂದ ಕತ್ತರಿಸಿದ ಹಾಗೂ ಚಿನ್ನದ ಹಾಳೆಗಳು, ಬೆಳ್ಳಿಯ ತಂತಿಗಳು, ಸಾಂತಾ ಕ್ಲಾಸ್ ಬೊಂಬೆಗಳು, ಮತ್ತು ಸಣ್ಣ ಗೊಂಬೆಗಳನ್ನು ಅಲಂಕಾರಿಕ ವಸ್ತುಗಳಾಗಿ ಬಳಸುತ್ತಾರೆ.