ಬೆಂಗಳೂರು:- 2024 ಕಳೆದು 2025ರ ವರ್ಷಕ್ಕೆ ಕಾಲಿಡಲು ಕೆಲವೇ ದಿನಗಳು ಬಾಕಿ ಇದ್ದು, ನೂತನ ವರ್ಷ ಬರಮಾಡಿಕೊಳ್ಳಲು ಸಿಟಿ ಮಂದಿ ಇನ್ನಿಲ್ಲದ ತಯಾರಿ ಕೈಗೊಂಡಿದ್ದಾರೆ.
ಕೇಂದ್ರದ ಮತ್ತೊಂದು ಮಹತ್ವದ ಹೆಜ್ಜೆ: ರೈತರಿಗಾಗಿ ಸಹಾಯವಾಣಿ ಸ್ಥಾಪನೆ! ಏನಿದರ ವಿಶೇಷ!
ಈ ಮಧ್ಯೆ ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ನ್ಯೂ ಇಯರ್ ನಲ್ಲಿ ಈ ಸಲ ಪಾರ್ಟಿ ಮಾಡುವವರ ಅನುಕೂಲಕ್ಕಾಗಿ ಹೊಸ ವ್ಯವಸ್ಥೆ ಕೂಡ ಮಾಡಲಾಗಿದೆ. ಪಾರ್ಟಿ ಮಾಡಿ ಮನೆಗೆ ಹೋಗಲು ಕ್ಯಾಬ್ ಫೆಸಿಲಿಟಿ ನೀಡಲಾಗುತ್ತಿದೆ.
ರಾತ್ರಿಯಲ್ಲ ಪಾರ್ಟಿ ಮಾಡಿ ಎಲ್ಲೊಂದರಲ್ಲಿ ಓಡಾಡುವುದು. ಹಾಗೇ ಕುಡಿದ ಮತ್ತಲ್ಲಿ ಬೈಕ್, ಕಾರು ಓಡಿಸಲಾಗದೇ ಅಪಘಾತ ಪ್ರಕರಣಗಳು ಸಂಭವಿಸಿವೆ. ಹೀಗಾಗಿ ಈ ಬಾರಿ ಈ ರೀತಿಯ ಅನಾಹುತಗಳಿಗೆ ಬ್ರೇಕ್ ಹಾಕಲು ಪಬ್ನವರೇ ವಿಶೇಷ ಕ್ಯಾಬ್ ಫೆಸಿಲಿಟಿ ನೀಡುತ್ತಿವೆ. ಹೀಗಾಗಿ ಪಬ್ ಬುಕ್ಕಿಂಗ್ ಜೊತೆ ಕ್ಯಾಬ್ ಸೇವೆ ಇರಲಿದೆ.
ಪಬ್ ಪಾರ್ಟಿ ಬುಕ್ಕಿಂಗ್ ಜೊತೆ ಕ್ಯಾಬ್ ಬುಕ್ಕಿಂಗ್ ಕೂಡ ಮಾಡಬಹುದಾಗಿದೆ. ಮಹಿಳೆಯರ ಸೇಫ್ಟಿಗೂ ಹೆಚ್ಚಿನ ಗಮನ ಕೊಡಲು ಗೃಹ ಇಲಾಖೆ ಸೂಚಿಸಿದೆ. ಬ್ರಿಗೇಡ್ ರೋಡ್ ಸೇರಿ ಕ್ರೌಡ್ ಜಾಗಗಳಲ್ಲಿ ಸೇಫ್ ಸ್ಪಾಟ್ ರಚಿಸಲು ಸೂಚಿಸಲಾಗಿದೆ.. ಡಿಸೆಂಬರ್ 31 ರಂದು ನಗರದಲ್ಲಿ 7 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಬ್ರಿಗೇಡ್ ರೋಡ್ ಒಂದರಲ್ಲೇ 2 ರಿಂದ 3 ಲಕ್ಷ ಜನ ಸೇರುವ ಸಾಧ್ಯತೆ ಇದೆ. ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆ ತನಕ ಪಬ್, ರೆಸ್ಟೋರೆಂಟ್ ಗಳನ್ನು ತೆರೆಯುವ ಅವಕಾಶ ಕೇಳಲಾಗಿದೆ.