ಬೆಂಗಳೂರು/ನವದೆಹಲಿ:- ಕೃಷಿ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದ್ದು, ಶೀಘ್ರವೇ ರಾಷ್ಟ್ರೀಯ ರೈತ ಸಹಾಯವಾಣಿ ಸ್ಥಾಪನೆ ಸಾಧ್ಯತೆ ಇದೆ.
ಕೂದಲಿನ ಸೌಂದರ್ಯಕ್ಕೆ ಅಡುಗೆ ಮನೆಯಲ್ಲಿದೆ ಮದ್ದು: ದೇಸಿ ತುಪ್ಪ ಹೀಗೆ ಬಳಸಿ!
ಕೇಂದ್ರ ಸರ್ಕಾರವು ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಕೃಷಿ ಕ್ಷೇತ್ರದಲ್ಲಿ ಈ ಬದಲಾವಣೆ ರೈತರಿಗೆ ಅನುಕೂಲ ಆಗಲಿದೆ.
ಮುಂಬರುವ ವರ್ಷದಲ್ಲಿ ರೈತರಿಗಾಗಿ ರಾಷ್ಟ್ರೀಯ ಸಹಾಯವಾಣಿ ಸೇವೆ ಆರಂಭಿಸುವ ಸಾಧ್ಯತೆ ಇದೆ. ದೆಹಲಿ ಎನ್ಸಿಆರ್ ಪ್ರದೇಶದಲ್ಲಿ ಇದಕ್ಕಾಗಿ ಬೃಹತ್ ಕಾಲ್ ಸೆಂಟರ್ ಸ್ಥಾಪನೆಯಾಗಲಿದೆ. ಇದು ಟೋಲ್ ಫ್ರೀ ಹೆಲ್ಪ್ಲೈನ್ ಆಗಿರಲಿದ್ದು ದೇಶದ ಯಾವುದೇ ಮೂಲೆಯಿಂದಲಾದರೂ ಹೆಲ್ಪ್ಲೈನ್ಗೆ ಬರುವ ರೈತರ ಕರೆಗಳಿಗೆ ದಿನದ 24 ಗಂಟೆಯೂ ಸ್ಪಂದನೆ ಸಿಗಲಿದೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಕೃಷಿ ಸಚಿವರೂ ಆಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರ ಮಹತ್ವಾಕಾಂಕ್ಷಿ ಐಡಿಯಾ ಇದಾಗಿದೆ. ಕೃಷಿ ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ, ಹಾಗೂ ಈ ಯೋಜನೆಗಳಲ್ಲಿ ರೈತರಿಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ಅದನ್ನು ಪರಿಹರಿಸಲು ಸಹಾಯವಾಣಿ ರೂಪಿಸಲಾಗಿದೆ. ಇಡೀ ದೇಶಕ್ಕೆ ಒಂದೇ ಸಹಾಯವಾಣಿ ಸಂಖ್ಯೆ ಇರುತ್ತದೆ.
ಶಿವರಾಜ್ ಸಿಂಗ್ ಚೌಹಾಣ್ ಅವರು ಕೆಲ ತಿಂಗಳ ಹಿಂದೆಯೇ ಇಂಥದ್ದೊಂದು ರೈತ ಸಹಾಯವಾಣಿ ಯೋಜನೆ ಬಗ್ಗೆ ಸುಳಿವು ನೀಡಿದ್ದರು. 2025ರ ಮೊದಲ ಕ್ವಾರ್ಟರ್ನೊಳಗೆ ಈ ಯೋಜನೆಗೆ ಬಿಡ್ಗಳನ್ನು ಅಂತಿಮಗೊಳಿಸಬಹುದು. ಟೆಲಿಕಮ್ಯೂನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಎನ್ನುವ ಸಂಸ್ಥೆ ಈ ಯೋಜನೆಗೆ ಆಸಕ್ತಿ ತೋರಿದೆ.
ಸಹಾಯವಾಣಿ ಹೇಗೆ ಕೆಲಸ ಮಾಡುತ್ತದೆ?
ರೈತರ ಈ ಸಹಾಯವಾಣಿಯ ಸಂಖ್ಯೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. 100 ಸೀಟರ್ಗಳ ಕಾಲ್ ಸೆಂಟರ್ ಸ್ಥಾಪನೆಯಾಗಲಿದ್ದು, ವಾರದ ಏಳೂ ದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಹಾಯವಾಣಿ ಚಾಲನೆಯಲ್ಲಿರುತ್ತದೆ. ದೇಶದ ಯಾವುದೇ ಮೂಲೆಯಿಂದಲಾದರೂ ಲ್ಯಾಂಡ್ಲೈನ್ ಮತ್ತು ಮೊಬೈಲ್ ನಂಬರ್ಗಳಿಂದ ಇದಕ್ಕೆ ಕರೆ ಮಾಡಬಹುದು. ಕನ್ನಡವೂ ಸೇರಿದಂತೆ 22 ಭಾಷೆಗಳಲ್ಲಿ ಸೇವೆ ಇರಲಿದೆ.
ವಿವಿಧ ಪ್ರದೇಶಗಳಿಗೆ ನಿರ್ದಿಷ್ಟ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ.