ಆಹಾರ ಪ್ರಿಯರು ತುಪ್ಪವನ್ನು ತಿನ್ನಲು ಹೆಚ್ಚಾಗಿ ಇಷ್ಟಪಡುತ್ತಾರೆ. ಅದೆಷ್ಟೋ ಮಂದಿ ಬಿಸಿ ಅನ್ನಕ್ಕೆ ತುಪ್ಪ ಹಾಕದಿದ್ದರೆ ಮುಟ್ಟುವುದಕ್ಕೂ ಇಷ್ಟಪಡುವುದಿಲ್ಲ. ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವುದಲ್ಲದೇ ಹಲವಾರು ಪ್ರಯೋಜನಗಳು ತುಪ್ಪದಲ್ಲಿದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಭಾರತದಲ್ಲಿ ತುಪ್ಪ ತಿನ್ನುವ ಪದ್ಧತಿ ಯುಗ ಯುಗಗಳಿಂದಲೂ ನಡೆದುಕೊಂಡು ಬಂದಿದೆ. ತುಪ್ಪದ ಪ್ರಯೋಜನಗಳನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ.
ಪುರುಷರ ಗಮನಕ್ಕೆ: ಈ ಗುಟ್ಟುಗಳನ್ನು ಅರಿತರೆ ಲೈಂಗಿಕ ಜೀವನ ಖುಷಿ ಆಗಿರುತ್ತೆ!
ಕೂದಲ ಆರೈಕೆಗೆ ದೇಸಿ ತುಪ್ಪ ಉತ್ತಮ ಆಯ್ಕೆಯಾಗಿದೆ. ಈ ತುಪ್ಪವನ್ನು ತಲೆಗೆ ಹಚ್ಚುವುದರಿಂದ ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ದೇಸಿ ತುಪ್ಪವನ್ನು ತಲೆಗೆ ಹಚ್ಚುವುದರಿಂದ ತಲೆಹೊಟ್ಟು ಉಂಟುಮಾಡುವ ಶಿಲೀಂಧ್ರವನ್ನು ನಿವಾರಿಸಿ ಕೂದಲನ್ನು ಆರೋಗ್ಯಕರವಾಗಿಡುತ್ತದೆ. ಅದಲ್ಲದೇ, ತುಪ್ಪವನ್ನು ಹಚ್ಚುವುದರಿಂದ ಕೂದಲಿನ ಅನೇಕ ಸಮಸ್ಯೆಗಳು ನಿವಾರಿಸುತ್ತದೆ.
ದೇಸಿ ತುಪ್ಪದಲ್ಲಿ ವಿಟಮಿನ್ ಎ ಮತ್ತು ಇ ಸಮೃದ್ಧವಾಗಿದೆ. ತುಪ್ಪವು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ದೇಸಿ ತುಪ್ಪದಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು, ವಿಟಮಿನ್ ಎ, ಜಿ, ಕೆ 2 ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಕೂದಲಿಗೆ ನೈಸರ್ಗಿಕ ಕಂಡೀಷನರ್ ಆಗಿ ಕಾರ್ಯನಿರ್ವಹಿಸುತ್ತದೆ.
ದೇಸಿ ತುಪ್ಪದಲ್ಲಿರುವ ವಿಟಮಿನ್ ಇ ಕೂದಲು ಉದುರುವುದನ್ನು ತಡೆದು ನೆತ್ತಿಯನ್ನು ಬಲಪಡಿಸಲು ಸಹಕಾರಿಯಾಗಿದೆ. ತಲೆಗೆ ನಿಯಮಿತವಾಗಿ ದೇಸಿ ತುಪ್ಪವನ್ನು ಹಚ್ಚುವುದರಿಂದ ಸತ್ತ ಚರ್ಮಕೋಶಗಳನ್ನು ತೆಗೆದುಹಾಕಿ ಕೂದಲಿನಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ.
ಹೀಗೆ ಬಳಸಿ:
ಮೊದಲಿಗೆ ದೇಸಿ ತುಪ್ಪವನ್ನು ಲಘುವಾಗಿ ಬಿಸಿ ಮಾಡಿಕೊಳ್ಳಿ. ಹದವಾಗಿ ಬಿಸಿ ಮಾಡಿದ ನಿಮ್ಮ ನೆತ್ತಿ ಮತ್ತು ಕೂದಲಿನ ಬೇರುಗಳನ್ನು ಮಸಾಜ್ ಮಾಡಿ. ತುಪ್ಪವು ಕನಿಷ್ಠ ಒಂದು ಗಂಟೆ ಅಥವಾ ರಾತ್ರಿ ಪೂರ್ತಿ ಕೂದಲಿನಲ್ಲಿ ಉಳಿಯಲು ಬಿಡುವುದು ಒಳ್ಳೆಯದು. ಒಂದು ಗಂಟೆಯ ನಂತರ ಅಥವಾ ಬೆಳಗ್ಗೆ ಶಾಂಪೂ ಬಳಸಿ ಕೂದಲನ್ನು ತೊಳೆಯಬೇಕು.