ಮಡಿಕೇರಿ:- ದೇಶದ ರಾಜಕಾರಣಿಗಳಲ್ಲಿ ನಂ.1 ಸುಳ್ಳುಗಾರ ಸಿಟಿ ರವಿ ಎಂದು ಎಂ.ಲಕ್ಷ್ಮಣ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸಿ.ಟಿ.ರವಿ ಒಬ್ಬ ಡ್ರಗ್ ಅಡಿಕ್ಟ್, ಇಡೀ ದೇಶದ ರಾಜಕಾರಣಿಗಳಲ್ಲಿ ಎಲ್ಲೂ ನೋಡುವ ಹಾಗೆ ಇಲ್ಲ, ಟಾಪ್ 10 ನಲ್ಲಿ ನಂ.1 ಸುಳ್ಳುಗಾರ ಅವರೇ ಬರುತ್ತಾರೆ ಎಂದರು.
ಸಿಟಿ ರವಿ ಅವರು ಸದನದಲ್ಲಿ ಒಬ್ಬ ಹೆಣ್ಣುಮಗಳಿಗೆ ಆಕ್ಷೇಪಾರ್ಹ ಸಂಭಾಷಣೆ ಮಾಡಿ, ನಾನು ಹಾಗೆ ಅಂದಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಅಲ್ಲದೇ, ಕಾನೂನಾತ್ಮಕವಾಗಿ ಅರೆಸ್ಟ್ ಮಾಡಿದ್ದರೆ, ಅರೆಸ್ಟ್ ಮಾಡಿರುವುದನ್ನೇ ವಿಚಿತ್ರವಾಗಿ ಬಿಂಬಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಹಾಗೂ ಸಿಟಿ ರವಿ ಅವರಿಗೆ ನಾಚಿಕೆಯಾಗಬೇಕು.
ಸಭಾಪತಿ ಬಸವರಾಜ ಹೊರಟ್ಟಿ ಅವರು ಆರಂಭದಲ್ಲಿ ಚಂದ ಇದ್ರು. ಆಮೇಲೆ ಅವರನ್ನು ಬಿಜೆಪಿ ಅವರೇ ಅವರನ್ನು ಎದುರಿಸಿ ಅವರ ಕೈಯಲ್ಲಿ ಬೇರೆ ರೀತಿಯಲ್ಲಿ ಹೇಳಿಕೆ ಕೊಡಿಸುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಮಹಜರು ಮಾಡಲು ಅವಕಾಶ ಕೊಡುತ್ತಿಲ್ಲ. ಇದು ಯಾಕೆ ಹೀಗೆ ಮಾಡುತ್ತಿದ್ದಾರೆ. ನಮ್ಮ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್ ಹಾಕಿ ಅವರನ್ನು ಎದುರಿಸುವ ಕೆಲಸ ಮಾಡಿಸುತ್ತ ಇದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.