ಬೆಂಗಳೂರು:- ನ್ಯೂ ಇಯರ್ ಗೆ ಕೌಂಟ್ ಡೌನ್ ಶುರುವಾಗಿದ್ದು, ಮಹಿಳೆಯರ ಸೇಫ್ಟಿಗೆ ಹೊಸ ಐಡಿಯಾ ಮಾಡಲಾಗಿದೆ. ಈ ಸಲ ಪಾರ್ಟಿ ಮಾಡುವವರ ಅನುಕೂಲಕ್ಕಾಗಿ ಹೊಸ ವ್ಯವಸ್ಥೆ ಕೂಡ ಮಾಡಲಾಗಿದೆ. ಪಾರ್ಟಿ ಮಾಡಿ ಮನೆಗೆ ಹೋಗಲು ಕ್ಯಾಬ್ ಫೆಸಿಲಿಟಿ ನೀಡಲಾಗುತ್ತಿದೆ.
ಸಿಲಿಕಾನ್ ಸಿಟಿಯಲ್ಲಿ ಡೆಡ್ಲಿ ಅಟ್ಯಾಕ್: ಹೋಟೆಲ್ ಗೆ ನುಗ್ಗಿ ವ್ಯಕ್ತಿಯ ಕೈ ಕತ್ತರಿಸಿ ದುಷ್ಕರ್ಮಿಗಳು ಪರಾರಿ..!
ರಾತ್ರಿಯಲ್ಲ ಪಾರ್ಟಿ ಮಾಡಿ ಎಲ್ಲೊಂದರಲ್ಲಿ ಓಡಾಡುವುದು. ಹಾಗೇ ಕುಡಿದ ಮತ್ತಲ್ಲಿ ಬೈಕ್, ಕಾರು ಓಡಿಸಲಾಗದೇ ಅಪಘಾತ ಪ್ರಕರಣಗಳು ಸಂಭವಿಸಿವೆ. ಹೀಗಾಗಿ ಈ ಬಾರಿ ಈ ರೀತಿಯ ಅನಾಹುತಗಳಿಗೆ ಬ್ರೇಕ್ ಹಾಕಲು ಪಬ್ನವರೇ ವಿಶೇಷ ಕ್ಯಾಬ್ ಫೆಸಿಲಿಟಿ ನೀಡುತ್ತಿವೆ. ಹೀಗಾಗಿ ಪಬ್ ಬುಕ್ಕಿಂಗ್ ಜೊತೆ ಕ್ಯಾಬ್ ಸೇವೆ ಇರಲಿದೆ.
ಪಬ್ ಪಾರ್ಟಿ ಬುಕ್ಕಿಂಗ್ ಜೊತೆ ಕ್ಯಾಬ್ ಬುಕ್ಕಿಂಗ್ ಕೂಡ ಮಾಡಬಹುದಾಗಿದೆ. ಮಹಿಳೆಯರ ಸೇಫ್ಟಿಗೂ ಹೆಚ್ಚಿನ ಗಮನ ಕೊಡಲು ಗೃಹ ಇಲಾಖೆ ಸೂಚಿಸಿದೆ. ಬ್ರಿಗೇಡ್ ರೋಡ್ ಸೇರಿ ಕ್ರೌಡ್ ಜಾಗಗಳಲ್ಲಿ ಸೇಫ್ ಸ್ಪಾಟ್ ರಚಿಸಲು ಸೂಚಿಸಲಾಗಿದೆ.. ಡಿಸೆಂಬರ್ 31 ರಂದು ನಗರದಲ್ಲಿ 7 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಬ್ರಿಗೇಡ್ ರೋಡ್ ಒಂದರಲ್ಲೇ 2 ರಿಂದ 3 ಲಕ್ಷ ಜನ ಸೇರುವ ಸಾಧ್ಯತೆ ಇದೆ. ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆ ತನಕ ಪಬ್, ರೆಸ್ಟೋರೆಂಟ್ ಗಳನ್ನು ತೆರೆಯುವ ಅವಕಾಶ ಕೇಳಲಾಗಿದೆ. ಪೊಲೀಸ್ ಇಲಾಖೆಯಿಂದ ರಾತ್ರಿ 1 ಗಂಟೆ ತನಕ ಅವಕಾಶ ಕೊಡಲು ಸಾಧ್ಯತೆ ಇದೆ.