ಬೆಂಗಳೂರು:- ಸಿಲಿಕಾನ್ ಸಿಟಿಯಲ್ಲಿ ಡೆಡ್ಲಿ ಅಟ್ಯಾಕ್ ನಡೆದಿದ್ದು, ಹೋಟೆಲ್ ಗೆ ನುಗ್ಗಿ ವ್ಯಕ್ತಿಯ ಕೈ ಕತ್ತರಿಸಿ ದುಷ್ಕರ್ಮಿಗಳು ಪರಾರಿ ಆಗಿರುವ ಘಟನೆ ಜರುಗಿದೆ.
Hubballi: ಗೃಹ ಸಚಿವರಿಗೆ ಸೆಲ್ಯೂಟ್ ಮಾಡಿ ಸ್ವಾಗತಿಸಿದ ಸಚಿವ ಸಂತೋಷ ಲಾಡ್!
ಬೆಂಗಳೂರಿನ ದೇವನಹಳ್ಳಿಯ ವಿಶ್ವನಾಥಪುರದಲ್ಲಿ ಏಕಾಏಕಿ ಹೋಟೆಲ್ಗೆ ನುಗ್ಗಿದ ದುರ್ಷರ್ಮಿಗಳು ಊಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಮಚ್ಚನಿಂದ ಮನಸ್ಸೋ ಇಚ್ಛೆ ದಾಳಿ ಮಾಡಿದ್ದಾರೆ. ಶ್ರೀರಾಮ್ ಎಂಬುವನೇ ದಾಳಿ ಮಾಡಿ ಪರಾರಿಯಾಗಿದ್ದಾನೆ. ಹಲ್ಲೆಗೊಳಗಾದ ಮಂಜುನಾಥ್, ಶ್ರೀರಾಮ್ನ ಅತ್ತೆ ಮಗ. ತಂದೆ ಕೊಲೆ ಪ್ರಕರಣದಲ್ಲಿ ಸಹಾಯಕ್ಕೆ ಬಂದಿಲ್ಲವೆಂದು ಶ್ರೀರಾಮ್, ಮಂಜುನಾಥ್ ಮೇಲೆ ದ್ವೇಷ ಬೆಳೆಸಿದ್ದ, ಇಂದು ಏಕಾಏಕಿ ಅಟ್ಯಾಕ್ ಮಾಡಿದ್ದಾನೆ.
ಮಂಜುನಾಥ್ ಎಂಬುವವರನ್ನು ಚೇಸ್ ಮಾಡಿಕೊಂಡು ಹೋಟೆಲ್ಗೆ ನುಗ್ಗಿದ್ದಾರೆ. ಏಕಾಏಕಿ ಅಟ್ಯಾಕ್ ಮಾಡಿದ ಗ್ಯಾಂಗ್ ಮಂಜುನಾಥ್ ಕೈ ಕತ್ತರಿಸಿ, ಕಾಲು ದೇಹದ ಮೇಲೆ ಲಾಂಗ್ ಬೀಸಿ ಪರಾರಿಯಾಗಿದ್ದಾರೆ.
ತಂದೆಯ ಕೊಲೆ ಕೇಸ್ ನಲ್ಲಿ ಸಹಾಯ ಮಾಡಿಲ್ಲವೆಂದು ಶ್ರೀರಾಮ್, ಮಂಜುನಾಥ್ ಮೇಲೆ ದ್ವೇಷ ಬೆಳೆಸಿದ್ದ. ಇವತ್ತು ಮಂಜುನಾಥ್ನನ್ನು ಹಿಂಬಾಲಿಸಿ ಮಚ್ಚು ಬೀಸಿ ಪರಾರಿಯಾಗಿದ್ದಾರೆ. ಮಚ್ಚು ಬೀಸಿದಕ್ಕೆ ಹೋಟೆಲ್ ಸಿಬ್ಬಂದಿ ಸೇರಿದಂತೆ ಅಲ್ಲಿದ್ದ ಜನರು ಭಯಗೊಂಡಿದ್ದಾರೆ. ಎಲ್ಲರೂ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭೋವಿಪಾಳ್ಯದ ನಿವಾಸಿಗಳು ಎಂದು ತಿಳಿದುಬಂದಿದೆ.