ಚಾಮರಾಜನಗರ: ಅಮೇರಿಕಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಕನ್ನಡ ಚಿತ್ರರಂಗದ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು ಪವಾಡ ಪುರುಷ ಮಲೆ ಮಹದೇಶ್ವರ ಬೆಟ್ಟದಲ್ಲಿ ಉರುಳು ಸೇವೆ ಮಾಡಿದ್ದಾರೆ.
ಮನೆಗೆ ತಂದ ಈರುಳ್ಳಿ ಕೆಡದಂತೆ ಶೇಖರಿಸಿಡುವುದು ಹೇಗೆ ಗೊತ್ತಾ!?ಈ ಟಿಪ್ಸ್ ಫಾಲೋ ಮಾಡಿ!
ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳು ಶಿವರಾಜ್ ಕುಮಾರ್ ರವರ ಪೋಟೊ ಪ್ರದರ್ಶನ ಮಾಡಿ ಮಲೆ ಮಹದೇಶ್ವರನಲ್ಲಿ ಹರಕೆ ಹೊತ್ತಿರುವುದಾಗಿ ತಿಳಿಸಿದರು.
ಮಲೆಮಾದಪ್ಪನ ಸನ್ನಿದಿಯಲ್ಲಿ ಸುತ್ತಲೂ ಉರುಳು ಸೇವೆ ಮಾಡುವ ಮೂಲಕ ತಮ್ಮ ಅಭಿಮಾನವನ್ನು ತೋರ್ಪಡಿಸಿದರು.