ಸಾಮಾನ್ಯವಾಗಿ ಎಲ್ಲರೂ ಹಲ್ಲಿಗಳನ್ನು ನೋಡಿರುತ್ತಾರೆ. ಯಾಕೆಂದರೆ, ಹಲ್ಲಿಗಳು ಸರ್ವೇಸಾಮಾನ್ಯವಾಗಿರುತ್ತದೆ. ಅದರಲ್ಲೂ ಬೇಸಿಗೆ ಕಾಲ ಬಂತೆಂದರೆ ಹಲ್ಲಿಗಳ ಕಾಟ ಹೆಚ್ಚಾಗುವುದು, ಹಲ್ಲಿಗಳನ್ನು ನೋಡುವುದು ಶುಭ ಎಂದು ಹೇಳಲಾಗುತ್ತದೆ, ಅನೇಕ ಮನೆಗಳಲ್ಲಿ ಅವುಗಳ ಮೇಲೆ ಸಿಂಧೂರವನ್ನು ಸಿಂಪಡಿಸಿ ಪೂಜಿಸುತ್ತಾರೆ. ಆದರೆ ಹಲ್ಲಿಗಳು ಅನೇಕ ಅಶುಭ ಸೂಚನೆಗಳನ್ನು ನೀಡುತ್ತವೆ.
ಸಿದ್ದರಾಮಯ್ಯ ಸರ್ಕಾರ ನಮ್ಮನ್ನು ಅಪಮಾನ ಮಾಡಿದೆ: ಬೇಸರ ಹೊರ ಹಾಕಿದ ಬಸವ ಜಯಮೃತ್ಯುಂಜಯ ಶ್ರೀ!
ಹಲ್ಲಿಗಳು ಮೈ ಮೇಲೆ ಬಿದ್ದರೆ ಅಥವಾ ಸ್ಪರ್ಶಿಸಿದರೆ ತಕ್ಷಣ ಸ್ನಾನ ಮಾಡಬೇಕು ಎಂದು ಮನೆಯಲ್ಲಿ ಹಿರಿಯರು ಹೇಳುವುದನ್ನು ನೀವು ಆಗಾಗ ಕೇಳಿರಬಹುದು.
ಇದೊಂದು ತುಂಬಾ ಅಪಾಯಕಾರಿ ಜೀವಿಯಾಗಿದ್ದು, ಇದು ಬಿದ್ದ ಆಹಾರ ಸೇವಿಸಿದರೆ ಸಾಯಬಹುದು ಎಂದು ಹೇಳಲಾಗುತ್ತದೆ. ಏಕೆಂದರೆ ಹಲ್ಲಿ ತನ್ನ ದೇಹದಿಂದ ವಿಷವನ್ನು ಬಿಡುಗಡೆ ಮಾಡುತ್ತದೆ. ಹೀಗಾಗಿ ಇದು ಅಪಾಯಕಾರಿ ಜೀವಿಯಾಗಿದೆ. ಒಂದು ವೇಳೆ ಹಲ್ಲಿ ಕಚ್ಚಿದರೆ ಏನಾಗುತ್ತೆ ಎಂಬ ವಿಚಾರ ಅನೇಕ ಮಂದಿಗೆ ತಿಳಿದಿಲ್ಲ. ಈ ಬಗ್ಗೆ ಸಂಪೂರ್ಣ ವಿವರ ಈ ಕೆಳಗಿನಂತಿದೆ ನೋಡಿ
ನಿಜಕ್ಕೂ ಹಲ್ಲಿ ವಿಷ ಬಿಡುಗಡೆ ಮಾಡುತ್ತಾ?: ವಾಸ್ತವವಾಗಿ ಹಲ್ಲಿಗಳಿಂದ ಪ್ರಾಣ ಕಳೆದುಕೊಂಡಂತಹ ಘಟನೆಗಳು ಸಾಕಷ್ಟಿದೆ. ಇದೊಂದು ದುರಾದೃಷ್ಟಕರ ವಿಚಾರ ಎಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು ಈ ವಿಚಾರವನ್ನು ತುಂಬಾ ಲೈಟ್ ಆಗಿ ತೆಗೆದುಕೊಳ್ಳುತ್ತಾರೆ. ಜೊತೆಗೆ ಹಲ್ಲಿ ತಿಂದ ಆಹಾರ ಸೇವಿಸಿದವರು ಸಾಯುತ್ತಾರೆ ಎಂದೂ ಕೂಡ ಹೇಳಲಾಗುತ್ತದೆ.
ಆದರೆ, ಹಲ್ಲಿ ತಿನ್ನುವ ಆಹಾರ ವಿಷಕಾರಿಯಾಗಿರುವುದಿಲ್ಲ. ವಾಸ್ತವವಾಗಿ ಹೇಳುವುದಾದರೆ, ಹಲ್ಲಿಗಳು ಮನುಷ್ಯರನ್ನು ಕೊಲ್ಲುವಷ್ಟು ವಿಷವನ್ನು ಹೊಂದಿಲ್ಲ. ಇದನ್ನು ಸಂಶೋಧನೆಯೊಂದು ದೃಢಪಡಿಸಿದೆ. ಆದರೆ, ಹಲ್ಲಿ ತಿಂದ ಆಹಾರವನ್ನು ಸೇವಿಸುವುದರಿಂದ ವಾಂತಿ ಮತ್ತು ತಲೆನೋವು ಉಂಟಾಗುತ್ತದೆ. ಇದೆಲ್ಲವೂ ಅಲರ್ಜಿಯಿಂದ ಉಂಟಾಗುತ್ತದೆ. ಈ ರೋಗಲಕ್ಷಣಗಳನ್ನು ನಾವು ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಗುಣಪಡಿಸಿಕೊಳ್ಳಬಹುದು. ಆದರೆ ಈ ಬಗ್ಗೆ ಇನ್ನಷ್ಟು ಆಳವಾದ ಸಂಶೋಧನೆಗಳನ್ನು ನಡೆಸುವ ಅಗತ್ಯವಿದೆ.
ಹಲ್ಲಿ ಕಚ್ಚಿದರೆ ಏನಾಗುತ್ತದೆ?: ಸಾಮಾನ್ಯವಾಗಿ ಮನೆಯ ಗೋಡೆಗಳ ಮೇಲೆ ಕಂಡು ಬರುವ ಹಲ್ಲಿಗಳು ವಿಷಕಾರಿಯಲ್ಲ. ಅಲ್ಲದೇ, ಇದರ ಚರ್ಮದಿಂದ ವಿಷವು ಬಿಡುಗಡೆ ಆಗುವುದಿಲ್ಲ. ವಿಷವನ್ನು ಹೊಂದಿರುವ ಹಲ್ಲಿಗಳು ಸಾಮಾನ್ಯವಾಗಿ ಮನೆಗಳಲ್ಲಿ ಕಂಡು ಬರುವುದಿಲ್ಲ. ಇನ್ನೂ ಅಪರೂಪಕ್ಕೆ ಕಾಡುಗಳಲ್ಲಿ ಮಾತ್ರ ಇಂತಹ ವಿಷಕಾರಿ ಹಲ್ಲಿಗಳನ್ನು ಕಾಣಬಹುದು.
ಮನೆಗಳಲ್ಲಿ ಕಂಡುಬರುವ ಹಲ್ಲಿಗಳು ಸಾಮಾನ್ಯವಾಗಿ ಕೀಟಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಇವು ಮನುಷ್ಯರಿಗೆ ಯಾವುದೇ ರೀತಿಯ ಅಪಾಯವನ್ನುಂಟು ಮಾಡುವುದಿಲ್ಲ.
ಆದರೆ ಹಲ್ಲಿಗಳು ಪರಾವಲಂಬಿ ಜೀವಿಗಳಾಗಿದ್ದು, ಇವು ಬ್ಯಾಕ್ಟೀರಿಯಾವನ್ನು ಸಾಗಿಸಬಹುದು. ಇದರಿಂದ ಹಲ್ಲಿಗಳು ಸೋಂಕನ್ನು ಉಂಟು ಮಾಡಬಹುದು. ಆದರೆ ಹಲ್ಲಿಯ ಹಿಕ್ಕೆಗಳು ತುಂಬಾ ಅಪಾಯಕಾರಿಯಾಗಿದೆ. ಹಾಗಾಗಿ ಹಲ್ಲಿಯ ಮಲ ಗೋಡೆಗಳ ಮೇಲಿದ್ದರೆ ಆಗಾಗ ಸ್ವಚ್ಛಗೊಳಿಸುತ್ತಿರಬೇಕು
ಇನ್ನೂ ಹಲ್ಲಿ ಕಚ್ಚುವಿಕೆಯು ಅಪಾಯಕಾರಿ ಆಗಿದೆ. ಹೀಗಾಗಿ ಹಲ್ಲಿ ಕಚ್ಚಿದರೆ ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಹಲ್ಲಿ ಕಚ್ಚಿದರೆ ಗಾಬರಿಯಾಗದೇ ಕೆಲವು ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕು. ಕಚ್ಚಿದ ಭಾಗವನ್ನು ಮೊದಲು ಶುದ್ಧ ನೀರಿನಿಂದ ತೊಳೆಯಿರಿ. ನಂತರ ಸಾಬೂನಿನಿಂದ ಸ್ವಚ್ಛಗೊಳಿಸಿ. ನಾನ್-ಸೆಪ್ಟಿಕ್ ಲಭ್ಯವಿರುವ ಔಷಧಿಗಳನ್ನು ಹಚ್ಚಿ.