ತುಮಕೂರು:- ನೀರಲ್ಲಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ ಗೆ ಜಾಮೀನು ಮಂಜೂರು ಆಗಿದೆ.
ಜೈಲಿಂದ ಬಿಡುಗಡೆ ಬಳಿಕ ಮಾತನಾಡಿದ ಪ್ರತಾಪ್, ಬೇರೆಯರ ಮೇಲೆ ಆಗದ ಕ್ರಮ ನನ್ನ ವಿರುದ್ಧ ಮಾತ್ರ ಯಾಕೆ ಆಗಿದೆ ಎಂದರು.
ಧಾರವಾಡದಲ್ಲಿಯೂ ಹೆಚ್ಚುವರಿ ಪೊಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರ ಶೀಘ್ರವೇ ಅನುಮೋದನೆ ನೀಡಬೇಕು: ಬೆಲ್ಲದ
ನಾನು ಕೇವಲ 500 ಗ್ರಾಂ ಮಾತ್ರ ಸ್ಫೋಡಿಯಂ ಸ್ಫೋಟ ಮಾಡಿದ್ದೇನೆ. ಅದರೇ ದೇಶದಲ್ಲಿ ಹಲವು ಮಂದಿ ಯೂಟ್ಯೂಬರ್ಗಳು 1 ಕೆಜಿಗಿಂತಲೂ ಹೆಚ್ಚಿನ ಸೋಡಿಯಂ ಸ್ಫೋಟ ಮಾಡಿದ್ದಾರೆ. ಯೂಟ್ಯೂಬ್ ನೋಡಿದರೆ ವಿಶ್ವದಲ್ಲಿ ಹಲವು ಮಂದಿ ಈ ರೀತಿ ಬ್ಲ್ಯಾಸ್ಟ್ ಮಾಡಿದ್ದಾರೆ. ಅವರ ಮೇಲೂ ಆಗದ ಕ್ರಮ ನನ್ನ ಮೇಲೆ ಮಾತ್ರ ಯಾಕೆ ಎಂದು ಕೇಳಿದರು.
ವಿಜ್ಞಾನ ಪ್ರಯೋಗಕ್ಕೆ ಸಂಬಂಧಿಸಿದಂತೆ ಸ್ಫೋಟ ಮಾಡಿದ್ದೇನೆ ಎಂದು ಯೂಟ್ಯೂಬ್ನಲ್ಲೇ ತಿಳಿಸಿದ್ದೇನೆ. ಈ ವಿಚಾರ ಹೈಸ್ಕೂಲ್ ಮಕ್ಕಳ ಪಠ್ಯದಲ್ಲಿದೆ. ಯೂಟ್ಯೂಬ್ ಓಪನ್ ಮಾಡಿದರೆ ಹಲವು ಮಂದಿ ಈ ರೀತಿಯ ಪ್ರಯೋಗ ಮಾಡಿದ್ದಾರೆ. ಆದರೆ ನನ್ನನ್ನು ಮಾತ್ರ ಬಂಧಿಸಿದ್ದು ಯಾಕೆ? ನನಗೆ ನ್ಯಾಯ ಬೇಕು ಎಂದು ಅಳಲು ತೋಡಿಕೊಂಡರು.