ಮಹದೇವಪುರ ಕ್ಷೇತ್ರದ ಬೂದಿಗೆರೆ ಕ್ರಾಸ್ ಬಳಿ ನೂತನ ಓವಂ ಆಸ್ಪತ್ರೆ ವುಮೆನ್ ಅಂಡ್ ಚೈಲ್ಡ್ ಡೇ ಕೇರ್ ಸೆಂಟರ್ ಅನ್ನು ಓವಂ ಆಸ್ಪತ್ರೆ ಮಾಲೀಕರಾದ ಡಾ.ಆದರ್ಶ್ ಸೋಮಶೇಖರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಳೆದ ಹತ್ತು ವರ್ಷದಲ್ಲಿ 16 ಸಾವಿರ ಡಿಲಿವರಿ ಓವಂ ಆಸ್ಪತ್ರೆಯಲ್ಲಿ ಮಾಡಲಾಗಿದೆ.. ಓವಂ ಹೊಸಕೋಟೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಅತಿ ಸೂಕ್ಷ್ಮ ಮಕ್ಕಳ ಸಫಲ ನಿರ್ವಹಣೆ ಮಾಡಲಾಗಿದೆ ಎಂದರು.
ಓವಂ ಆಸ್ಪತ್ರೆಯ ಹೊಸಕೋಟೆ ಶಾಖೆಯು 2017 ರಲ್ಲಿ ಪ್ರಾರಂಭವಾಗಿದ್ದು, ಈ ಆಸ್ಪತ್ರೆಯಲ್ಲಿ ಲೆವೆಲ್-3 ಎನ್ ಐಸಿಯು ಸೌಲಭ್ಯವಿದೆ. ಕೇವಲ 500 ಗ್ರಾಂ ತೂಕವಿರುವ ಮಗುವು ಅಥವಾ ಮೂರು ತಿಂಗಳು ಮುಂಚಿತವಾಗಿ ( ಆರು ತಿಂಗಳಲ್ಲಿ ) ಜನಿಸಿದ ಮಕ್ಕಳಿಗೆ ಚಿಕಿತ್ಸೆ ಕೊಡುವ ಸೌಲಭ್ಯವಿದೆ ಎಂದು ತಿಳಿಸಿದರು..
GST Council Meetings: ಪಾಪ್ ಕಾರ್ನ್ ಮೇಲೆ 3 ರೀತಿಯ GST! 20ರೂ ಪ್ಯಾಕೆಟ್ ಬೆಲೆ ಎಷ್ಟು ಹೆಚ್ಚಾಗಲಿದೆ ಗೊತ್ತಾ.?
ಹುಟ್ಟಿದ ನಂತರ ಆಗುವ ಉಸಿರಾಟದ ಸಮಸ್ಯೆಗೆ ಬೇಕಾದ ವೆಂಟಿಲೇಟರ್, ಮೆದುಳು ಗಾಯವನ್ನು ಕಡಿಮೆ ಮಾಡುವ ಕೂಲಿಂಗ್ ಮುಂತಾದ ಆಧುನಿಕಯಂತ್ರಗಳಿಂದ ಬದುಕುವುದಷ್ಟೇ ಅಲ್ಲದೆ ಮುಂದೆ ಯಾವುದೇ ಅಂಗವೈಕ್ಯತೆ ಇಲ್ಲದೆ ಸಾಮಾನ್ಯರಾಗಿ ಜೀವಿಸಲು ಇಲ್ಲಿನ ಸುಸಜ್ಜಿತವಾದ ವೈದ್ಯರು ಮತ್ತು ಶುಶ್ರುಕಿಯರ ತಂಡ ಶ್ರಮಿಸುತ್ತಿದೆ ಎಂದು ಹೇಳಿದರು.
ಈ ಆಸ್ಪತ್ರೆಯು ಕೇವಲ ಹೊಸಕೋಟೆ ಅಲ್ಲದೆ ಸುತ್ಯಮುತ್ತಲಿನ ಪ್ರದೇಶಗಳಾದ ಕೋಲಾರ, ಚಿಂತಾಮಣಿ, ಮಾಲೂರು, ಅನಂತಪುರ, ಹಿಂದೂಪುರದ ಜನರಿಗೂ ಗುಣಮಟ್ಟದ ಚಿಕಿತ್ಸೆಯ ಲಾಭವನ್ನು ನೀಡುತ್ತಿದೆ. ಈ ವೇಳೆ ಮೆಡಿಕಲ್ ಡೈರೆಕ್ಟರ್ ಡಾ.ವೇಣುಗೋಪಾಲ್ ರೆಡ್ಡಿ, ಡಾ.ಮುರುಳಿಮೋಹನ್ , ಡಾ.ರಾಜೇಶ್, ಡಾ.ಭಾಗ್ಯಲಕ್ಷ್ಮೀ ರಾವ್ ಓವಂ ಕಾರ್ಪೊರೇಟ್ ಸಂಸ್ಥೆಯಿಂದ ಅರುಣ್ ಕುಮಾರ್ ಹೆಚ್.ಎಂ., ವಿದ್ಯಾಶ್ರೀ, ಅನೂಪ್ ಅಗರ್ ವಾಲ್ , ಮಂಜುನಾಥ್, ಮತ್ತಿತರರಿದ್ದರು.