ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರಿಗೆ ಅವರ ಫೇಸ್ಬುಕ್ ಗೆಳತಿ ಶ್ವೇತಾಗೌಡ ಎಂಬಾಕೆ ಸಂಕಷ್ಟ ತಂದಿದ್ದು, ಚಿನ್ನದ ವ್ಯಾಪಾರಿಗೆ ಆಕೆ ಕೋಟ್ಯಂತರ ರು. ವಂಚನೆ ಎಸಗಿದ ಪ್ರಕರಣದಲ್ಲಿ ಮಾಜಿ ಸಚಿವರಿಗೆ ಬಂಧನ ಭೀತಿ ಎದುರಾಗಿದೆ. ವರ್ತೂರ್ ಪ್ರಕಾಶ್ ಹೆಸರಲ್ಲಿ ಜ್ಯುವೆಲರಿ ಶಾಪ್ಗೆ ವಂಚಿಸಿದ ಕೇಸ್ನಲ್ಲಿ ಆರೋಪಿ ಶ್ವೇತಾ ಗೌಡ ಬಂಧನ ಆಗಿದೆ.
ಇದೀಗ ಬಂಧನದ ಭೀತಿಯಲ್ಲಿರುವ ವರ್ತೂರ್ ಪ್ರಕಾಶ್ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಬರುವಂತೆ ಪುಲಿಕೇಶಿನಗರ ಪೊಲೀಸರು ಮೂರು ಬಾರಿ ನೋಟಿಸ್ ನೀಡಿದ್ದರು. ಇಂದು ಬೆಳಗ್ಗೆ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ. ಇದೇ ವೇಳೆ ಆರೋಪಿ ಶ್ವೇತಾ ಗೌಡ ಕೊಟ್ಟಿದ್ದ ಗಿಫ್ಟ್ಗಳನ್ನ ಅಂದ್ರೆ ನಗದು, ಚಿನ್ನಾಭರಣ ಎಲ್ಲವನ್ನೂ ಪೊಲೀಸರಿಗೆ ವಾಪಸ್ ಕೊಟ್ಟಿದ್ದಾರೆ.
GST Council Meetings: ಪಾಪ್ ಕಾರ್ನ್ ಮೇಲೆ 3 ರೀತಿಯ GST! 20ರೂ ಪ್ಯಾಕೆಟ್ ಬೆಲೆ ಎಷ್ಟು ಹೆಚ್ಚಾಗಲಿದೆ ಗೊತ್ತಾ.?
ಒಟ್ಟು 12.50 ಲಕ್ಷ ರೂ. ನಗದು, ಮೂರು ಬ್ರಾಸ್ ಲೆಟ್, 1 ಚಿನ್ನದ ಉಂಗುರವನ್ನ ಎಸಿಪಿ ಗೀತಾ ಎದುರಿಗೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಶ್ವೇತಾ ಗೌಡ ಹೀಗೆ ಮಾಡ್ತಾಳೆಂದು ನನಗೆ ಗೊತ್ತಿಲ್ಲ, ನನಗೂ ಶ್ವೇತಗೌಡಳಿಗೂ ಯಾವುದೇ ಸಂಬಂಧವಿಲ್ಲ. ಗಿಫ್ಟ್ ಅಂತ ನನಗೆ ಆಕೆ ಕೆಲ ಒಡವೆ ನೀಡಿದ್ಲು ಎಂದು ಪೊಲೀಸರಿಗೆ ಜವಾಬು ನೀಡಿದ್ದಾರೆ.