ಬೆಂಗಳೂರು: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನ ಪರಿಷತ್ನಲ್ಲಿ ಎಂಎಲ್ಸಿ ಸಿಟಿ ರವಿ ಅವರು ನನ್ನ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪ ಮಾಡಿದ್ದರು. ಆದರೆ, ಸಿಟಿ ರವಿಯವರು ಈ ಆರೋಪವನ್ನು ಅಲ್ಲಗೆಳದಿದ್ದು, ನಾನು ಅಶ್ಲೀಲ ಪದವನ್ನು ಬಳಕೆ ಮಾಡಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಈ ವಿಚಾರ ರಾಜಕೀಯ ಜಟಾಪಟಿಗೂ ಕಾರಣವಾಗಿದೆ.
ಈ ವಿಚಾರವಾಗಿ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದಾರೆ. ಕೇಸರಿ ಶಾಲು ಹಾಕಿದ ತಕ್ಷಣ ದುಶ್ಯಾಸನರು ಯುಧಿಷ್ಠಿರ ಆಗೋದಿಲ್ಲ. ಸದನದಲ್ಲಿ ಒಬ್ಬ ಮಹಿಳೆಗೆ ಅವರು ಮಾತನಾಡಿದ್ದಾರೆ. ಬಿಜೆಪಿ ಅವರು ಏನೂ ಆಗೇ ಇಲ್ಲ ಅಂತಾರೆ. ಮಾಧ್ಯಮದಲ್ಲಿ ಬಂದ ವಿಡಿಯೋ ಕಾಂಗ್ರೆಸ್ ನವರು ಬಿಟ್ಟಿದ್ದು ಅಂತಾರೆ. ಪಾಕಿಸ್ತಾನ ಯುದ್ಧ ಗೆದ್ದ ರೀತಿ ಆಡ್ತಾ ಇದ್ದಾರೆ. ಅವರಲ್ಲಿ ಒಬ್ಬರಿಗೊಬ್ಬರಿಗೆ ಹೊಂದಾಣಿಕೆನೇ ಇಲ್ಲ. ವಿಡಿಯೋ ಎಫ್ ಎಸ್ ಎಲ್ ಗೆ ಹೋಗಿದೆ, ಎಲ್ಲಾ ರಿಪೋರ್ಟ್ ಬರಲಿ ಗೊತ್ತಾಗುತ್ತೆ. ಸಿಐಡಿ ಗೆ ಕೊಟ್ಟಿದ್ದಾರೆ, ಸತ್ಯಾಂಶ ಬರಲಿ ಬಿಡಿ ಎಂದು ಹೇಳಿದ್ದಾರೆ.
GST Council Meetings: ಪಾಪ್ ಕಾರ್ನ್ ಮೇಲೆ 3 ರೀತಿಯ GST! 20ರೂ ಪ್ಯಾಕೆಟ್ ಬೆಲೆ ಎಷ್ಟು ಹೆಚ್ಚಾಗಲಿದೆ ಗೊತ್ತಾ.?
ಕಾಂಗ್ರೆಸ್ ಅಧಿವೇಶನದ ಸಮಯದಲ್ಲಿ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಮೊದಲು ಬಿಎಸ್ ವೈ ಮನೆ ಮುಂದೆ ಪ್ರತಿಭಟನೆ ಮಾಡಲಿ ಎಂದು ಟಾಂಗ್ ಕೊಟ್ಟಿದ್ದಾರೆ. ಫೋಕ್ಸೋ ಕೇಸ್ ಗೆ ಇಷ್ಟೊಂದು ಫ್ರೀ ಬಿಡ್ತಾರಾ..? ಆ ವಿಡಿಯೋದ್ದು ಎಫ್ ಎಸ್ ಎಲ್ ರಿಪೋರ್ಟ್ ಬಂದಿದೆಯಲ್ವಾ, ಅದಕ್ಕೆ ಏನಂತಾರೆ ವಿಜಯೇಂದ್ರ? ಮುನಿರತ್ನ ವಿಚಾರ ಏನಾಯ್ತು? ಎಲ್ಲರದ್ದೂ ತ್ರಿಶಂಕು ಸ್ಥಿತಿ ಇದೆ, ಅದಕ್ಕೆ ಸಿಟಿ ರವಿ ಬೆನ್ನಿಗೆ ಒಗ್ಗಟ್ಟಾಗಿ ನಿಂತಿದ್ದಾರೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.