ಢಾಕಾ: ರೂಪುರ್ ಪರಮಾಣು ವಿದ್ಯುತ್ ಸ್ಥಾವರದಲ್ಲಿ 5 ಬಿಲಿಯನ್ ಡಾಲರ್ ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಇದೀ ಗವಿರೋಧಿ ಸಮಿತಿಯು ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದಲ್ಲಿ ರಷ್ಯಾದ ಸರ್ಕಾರಿ ಸಂಸ್ಥೆಯಾದ ರೊಸಾಟಮ್ ನಿರ್ಮಿಸುತ್ತಿರುವ ರೂಪುರ್ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣದಲ್ಲಿ ಭಾರತೀಯ ಕಂಪನಿಗಳು ತೊಡಗಿಸಿಕೊಂಡಿವೆ. ಮೊದಲ ಬಾಂಗ್ಲಾದೇಶದ ಪರಮಾಣು ವಿದ್ಯುತ್ ಸ್ಥಾವರವನ್ನು ರಾಜಧಾನಿ ಢಾಕಾದಿಂದ ಪಶ್ಚಿಮಕ್ಕೆ 160 ಕಿಮೀ ದೂರದಲ್ಲಿ ನಿರ್ಮಿಸಲಾಗುತ್ತಿದೆ.
ಹಸೀನಾ ಜೊತೆಗೆ ಅವರ ಮಗ ಸಜೀಬ್ ವಾಝೆದ್ ಜಾಯ್ ಮತ್ತು ಆಕೆಯ ಸೋದರ ಸೊಸೆ ಮತ್ತು ಯುಕೆ ಖಜಾನೆ ಸಚಿವೆ ಟುಲಿಪ್ ಸಿದ್ದಿಕ್ ಅವರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಬಿಡಿನ್ಯೂಸ್ ಭಾನುವಾರ ವರದಿ ಮಾಡಿದೆ. ರೂಪುರ್ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯಲ್ಲಿ 5 ಬಿಲಿಯನ್ ಡಾಲರ್ ಹಣಲನ್ನು ದುರುಪಯೋಗಪಡಿಸಿಕೊಂಡ ಆರೋಪವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಸೀನಾ, ಜಾಯ್ ಮತ್ತು ಟುಲಿಪ್ ಅವರು ರೂಪುರ್ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯಿಂದ ಮಲೇಷಿಯಾದ ಬ್ಯಾಂಕ್ಗೆ 5 ಬಿಲಿಯನ್ ಡಾಲರ್ ಹಣವನ್ನು ವರ್ಗಾಯಿಸಿದ ಆರೋಪದ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಭ್ರಷ್ಟಾಚಾರ ವಿರೋಧಿ ಆಯೋಗವನ್ನು ಹೈಕೋರ್ಟ್ ಕೇಳಿದ ನಂತರ ಈ ಬೆಳವಣಿಗೆ ನಡೆದಿದೆ.