ನವದೆಹಲಿ: ರವಿಚಂದ್ರನ್ ಅಶ್ವಿನ್ ಭಾರತದ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರು. ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ 2ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ (537) ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅಶ್ವಿನ್, ಬ್ರಿಸ್ಬೇನ್ ಟೆಸ್ಟ್ ನಂತರ ಡಿಸೆಂಬರ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು.
ಇದೀಗ ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ಪತ್ರ ಬರೆದು ಆರ್.ಅಶ್ವಿನ್ಗೆ ಶುಭ ಹಾರೈಸಿದ್ದಾರೆ. ಅಶ್ವಿನ್ರನ್ನು ಕ್ರೀಡೆಯ ರಾಯಭಾರಿ ಎಂದು ಬಣ್ಣಿಸಿರುವ ಪ್ರಧಾನಿ, ನೀವು ಕುಟುಂಬ ಹಾಗೂ ದೇಶಕ್ಕೆ ಹೆಮ್ಮೆ ತಂದಿದ್ದೀರಿ ಎಂದು ಶ್ಲಾಘಿಸಿದ್ದಾರೆ.ಪತ್ರದಲ್ಲಿ ಅಶ್ವಿನ್ರ 14 ವರ್ಷಗಳ ಕ್ರಿಕೆಟ್ ಬದುಕಿನ ಪ್ರಮುಖ ಕ್ಷಣ, ಸಾಧನೆಗಳನ್ನು ಮೆಲುಕು ಹಾಕಿದ್ದಾರೆ. ತಮ್ಮ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗಲೂ ಅಶ್ವಿನ್ ಕ್ರಿಕೆಟ್ ಆಡಿದ್ದ ಘಟನೆಯನ್ನು ಉಲ್ಲೇಖಿಸಿ ಅವರ ತ್ಯಾಗ ಮತ್ತು ಬದ್ಧತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕಹಿಯಾಗಿದ್ದರೂ ಈ ಜ್ಯೂಸ್ ಅಮೃತಕ್ಕೆ ಸಮಾನ: ಹಾಗಲಕಾಯಿ ಜ್ಯೂಸ್ ಪ್ರಯೋಜನ ತಿಳಿದ್ರೆ ಶಾಕ್ ಆಗ್ತೀರಾ..!?
‘ಕ್ರಿಕೆಟ್ನಿಂದ ನಿವೃತ್ತರಾಗುವ ದಿಢೀರ್ ನಿರ್ಧಾರ ಜಗತ್ತಿನೆಲ್ಲೆಡೆಯ ನಿಮ್ಮ ಅಭಿಮಾನಿಗಳಿ ಅಚ್ಚರಿ ತಂದಿದೆ. ನಿಮ್ಮಿಂದ ಎಲ್ಲರೂ ಮತ್ತಷ್ಟು ಆಫ್ ಬ್ರೇಕ್ ಬೌಲಿಂಗ್ ನಿರೀಕ್ಷೆಯಲ್ಲಿದ್ದಾಗ, ನೀವು ನಿವೃತ್ತಿಯ ಕೇರಮ್ ಬಾಲ್ ಎಸೆದು ಎಲ್ಲರನ್ನೂ ಚಕಿತಗೊಳಿಸಿದ್ದೀರಿ. ಭಾರತಕ್ಕೆ ಇಷ್ಟು ವರ್ಷಗಳ ಕಾಲ ಅದ್ಭುತ ಪ್ರದರ್ಶನ ನೀಡಿದ್ದೀರಿ. ಇದೀಗ ಈ ನಿರ್ಧಾರ ತಳೆಯುವುದು ಬಹಳ ಕಠಿಣ ಎಂಬುದು ಎಲ್ಲರಿಗೂ ತಿಳಿದಿದೆ’ ಎಂದಿದ್ದಾರೆ. ಈ ಸಂದರ್ಭ ನಾನು ನಿಮ್ಮ ಹೆತ್ತವರು, ನಿಮ್ಮ ಪತ್ನಿ ಪ್ರೀತಿ ಮತ್ತು ಪುತ್ರಿಗೂ ಶುಭಾಶಯ ತಿಳಿಸುತ್ತೇನೆ. ಅವರ ಪ್ರೋತ್ರಾಹ ಮತ್ತು ತ್ಯಾಗ ನಿಮ್ಮನ್ನು ಒಬ್ಬ ಉತ್ತಮ ಕ್ರಿಕೆಟರ್ ಮತ್ತು ವ್ಯಕ್ತಿಯನ್ನಾಗಿ ಬೆಳೆಸಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ರವಿಚಂದ್ರನ್ ಅಶ್ವಿನ್ 106 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ವೇಳೆ 200 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಅಲ್ಲದೆ ತಮ್ಮ ಕೆರಿಯರ್ನಲ್ಲಿ 27246 ಎಸೆತಗಳನ್ನು ಎಸೆದಿರುವ ಅವರು 537 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅನಿಲ್ ಕುಂಬ್ಳೆ ಬಳಿಕ ಭಾರತದ ಪರ ಅತ್ಯಧಿಕ ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.
ಹಾಗೆಯೇ 116 ಏಕದಿನ ಪಂದ್ಯಗಳಲ್ಲಿ 114 ಇನಿಂಗ್ಸ್ ಆಡಿರುವ ಅಶ್ವಿನ್ 6303 ಎಸೆತಗಳಲ್ಲಿ 156 ವಿಕೆಟ್ ಪಡೆದಿದ್ದಾರೆ. ಇನ್ನು 65 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಅಶ್ವಿನ್ 72 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಮೂರು ಸ್ವರೂಪಗಳಲ್ಲೂ 50 ಕ್ಕಿಂತ ಹೆಚ್ಚು ವಿಕೆಟ್ ಕಬಳಿಸಿದ ಟೀಮ್ ಇಂಡಿಯಾ ಬೌಲರ್ ಎನಿಸಿಕೊಂಡಿದ್ದಾರೆ.