ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರಿಂದ ಯಾವುದೇ ಸಮಾರಂಭ, ಪಾರ್ಟಿ, ಫಂಕ್ಷನ್ಗಳಿಗೆ ಹೋದಾಗ ಮುಜುಗರಕ್ಕೊಳಗಾಗುತ್ತಾರೆ. ಇದಕ್ಕೆ ಆನುವಂಶಿಕ ಕಾರಣಗಳಿರಬಹುದು.
ನೀವೂ ಕೂಡ ಬಿಳಿ ಕೂದಲಿಗೆ ಪರಿಹಾರ ಹುಡುಕುತ್ತಿದ್ದು, ಮಾರುಕಟ್ಟೆಯ ಹೇರ್ ಡೈ ಬಳಸಲು ಹಿಂಜರಿಯುವವರಾದರೆ, ನಿಮಗಾಗಿ ಮೊಸರಿನಿಂದ ತಯಾರಿಸಬಹುದಾದ ಆಯುರ್ವೇದಿಕ್ ಹೇರ್ ಡೈ ಪ್ರಯೋಜನಕಾರಿ ಆಗಿದೆ.
ಮನೆಯಲ್ಲಿರುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಆಯುರ್ವೇದಿಕ್ ಹೇರ್ ಡೈ ತಯಾರಿಸಬಹುದು. ಇದಕ್ಕಾಗಿ ಬೇಕಾಗಿರುವ ಪದಾರ್ಥಗಳೆಂದರೆ:- ಟೀ ಪುಡಿ, ಕಲೋಂಜಿ, ಆಮ್ಲಾ ಪುಡಿ, ಮೊಸರು, ಆಲೋವೆರಾ ಜೆಲ್ ಮತ್ತು ಮೆಹಂದಿ.
ಮೊದಲಿಗೆ ಒಂದೊಂದು ಸ್ಪೂನ್ ಟೀ ಪುಡಿ, ಕಲೋಂಜಿ, ಆಮ್ಲಾ ಪುಡಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಒಂದು ಲೋಟ ನೀರು ಹಾಕಿ ಐದಾರು ನಿಮಿಷ ಚೆನ್ನಾಗಿ ಕುದಿಸಿ. ಡಿಕಾಕ್ಷನ್ ತಣ್ಣಗಾದ ಬಳಿಕ ಒಂದು ಬಾಣಲೆಯಲ್ಲಿ ಮೊಸರು, ಆಲೋವೆರಾ ಜೆಲ್, ಮೆಹಂದಿಯನ್ನು ಡಿಕಾಕ್ಷನ್ ಬೆರೆಸುತ್ತಾ ಹದವಾಗಿ ಕಲಸಿ. ಇದನ್ನು ಮುಚ್ಚಿ ರಾತ್ರಿಯಿಡೀ ಹಾಗೆ ಬಿಡಿ.
ಕಬ್ಬಿಣದ ಬಾಣಲೆಯಲ್ಲಿ ರಾತ್ರಿ ಕಲಸಿಟ್ಟಾಗ ಹಸಿರು ಬಣ್ಣಕ್ಕಿದ್ದ ಹೇರ್ ಡೈ ಬೆಳಗಾಗುವಷ್ಟರಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಇದನ್ನು ಕೂದಲಿನ ಬುಡದಿಂದ ತುದಿವರೆಗೂ ಹಚ್ಚಿ ಒಂದೆರಡು ಗಂಟೆ ಹಾಗೆ ಬಿಡಿ. ನಂತರ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ.
ಈ ಆಯುರ್ವೇದಿಕ್ ಹೇರ್ ಡೈ ಅನ್ನು ನಿಯಮಿತವಾಗಿ ಬಳಸುವುದರಿಂದ ಬಿಳಿ ಕೂದಲಿನಿಂದ ಮುಕ್ತಿ ಪಡೆಯುವುದರ ಜೊತೆಗೆ ಕಾಂತಿಯುತ ಉದ್ದ ಕೂದಲು ನಿಮ್ಮದಾಗುತ್ತದೆ.