ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತವಾಗಲಿದೆ. 66/11 ಕೆವಿ ಬ್ಯಾಟರಾಯನಪುರ ಸಬ್ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ-8 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 11:00 ಯಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
L&T ಅಪಾರ್ಟ್ಮೆಂಟ್, ಯಶೋಧನಗರ, ಜಕ್ಕೂರು ಪ್ಲಾಂಟೇಶನ್, L&T ಅಪಾರ್ಟ್ಮೆಂಟ್, ಸೆಂಚುರಿ ಅಪಾರ್ಟ್ಮೆಂಟ್ ಬ್ಯಾಟರಾಯನಪುರ, ಸ್ಪಾರ್ಕಲ್ ಒನ್ ಮಾಲ್, ಅಮೃತಹಳ್ಳಿ, ಸಹಕಾರನಗರ ಜಿ ಬ್ಲಾಕ್, ಶಬರಿನಗರ, ಕೆನರಾ ಬ್ಯಾಂಕ್ ಲೇಔಟ್, ಧನಲಕ್ಷ್ಮಿ ಲೇಔಟ್, ತಿಂಡ್ಲು ಮುಖ್ಯರಸ್ತೆ, ಸರ್ ಎಂವಿ ಲೇಔಟ್, ಪಾರ್ಕ್, ತೀಂಡ್ಲು ಗ್ರಾಮ ಬಡಾವಣೆ ಸಪ್ತಗಿರಿ ಲೇಔಟ್, ಜ್ಞಾನೇಶ್ವರಿ ಲೇಔಟ್, ಗುರುದರ್ಶನ ಲೇಔಟ್, ವೆಂಕಟಸ್ವಾಮಪ್ಪ ಲೇಔಟ್, ನಂಜಪ್ಪ ವೃತ್ತ, ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.