ಬಾಲಕನೋರ್ವನು ತನ್ನ ಪಾಡಿಗೆ ತಾನು ಎಂಬಂತೆ ಆಟವಾಡುತ್ತಿದ್ದ, ಏಕಾಏಕಿ ಬೀದಿನಾಯಿಗಳ ಗುಂಪು ಅಟ್ಯಾಕ್ ಮಾಡಿರುವ ಘಟನೆ ಕೆಆರ್ ಪುರದ ಸೊನ್ನೆನಹಳ್ಳಿಯಲ್ಲಿ ನಡೆದಿದೆ.. ಬೆಳಿಗ್ಗೆ ಸರಿ ಸುಮಾರು 7.30 ರ ವೇಳೆಗೆ ಬಾಲಕನು ಎಂಟಿಎಂವೊಂದರ ವಾಚ್ ಮ್ಯಾನ್ ನಾಗಿ ಕೆಲಸ ಮಾಡುತ್ತಿದ್ದ ತನ್ನ ಚಿಕ್ಕಪ್ಪನೊಂದಿಗೆ ಮನೆಯಿಂದ ಕೆಳಗೆ ಬಂದಿದ್ದ, ರೋಡ್ ಬದಿಯಲ್ಲಿ ಆಟವಾಡುತ್ತಿದ್ದಾಗ ನಾಯಿಗಳು ಅಟ್ಯಾಕ್ ಮಾಡಿವೆ.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಒಂಟಿಯಾಗಿ ಓಡಾಡಲು ಭಯ ಪಡುವಂತಾಗಿದೆ.. ಇನ್ನೂ ಬಾಲಕನ ಮೇಲೆ ನಾಯಿಗಳು ಅಟ್ಯಾಕ್ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,
SBI Recruitment: ಉದ್ಯೋಗ ಹುಡುಕುತ್ತಿದ್ದೀರಾ..? SBI ಬ್ಯಾಂಕ್ʼನಲ್ಲಿದೆ ಭರ್ಜರಿ ಉದ್ಯೋಗಾವಕಾಶ! ಲಕ್ಷಗಟ್ಟಲೆ ಸಂಬಳ
ಬೀದಿ ನಾಯಿಗಳಿಂದ ಬಾಲಕ ತಪ್ಪಿಸಿಕೊಳ್ಳುಲು ಕಿರುಚಿಕೊಂಡಾಗ ಸ್ಥಳೀಯರು ಆಗಮಿಸಿ ಬಾಲಕನನ್ನು ರಕ್ಷಿಣೆ ಮಾಡಿದ್ದು, ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆ ದಾಖಲಾಗಿತ್ತು, ಯಾವುದೇ ಪ್ರಾಣಪಾಯದಿಂದ ಪಾರಾಗಿದ್ದಾನೆ.. ಇನ್ನೂ ಬೀದಿನಾಯಿಗಳ ಹಾವಳಿ ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ..