ಅಂಬರೀಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮನೆಗೆ ಬಂದ ಪುಟ್ಟ ಕಂದ ಮನೆಯ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ಇದೇ ಸಂಭ್ರಮದಲ್ಲಿ ಅಭಿಷೇಕ್ ಹಾಗೂ ಅವಿವಾ ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದ್ದು ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಅಭಿಷೇಕ್ ಅಂಬರೀಷ್ ಕ್ರೀಮ್ ಕಲರ್ ಕುರ್ತಾ ಧರಿಸಿದ್ದರೆ ಅವಿವಾ ಅವರು ಬಿಳಿ ಬಣ್ಣದ ಸೀರೆಯಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಸೀರೆಯುಟ್ಟು ಅದಕ್ಕೆ ತಕ್ಕಂತೆ ಬಿಳಿ ಬಣ್ಣದ ಮಲ್ಲಿಗೆ ಮುಡಿದು ಕ್ಯಾಮಾರಾಗೆ ಫೋಸ್ ಕೊಟ್ಟಿದ್ದಾರೆ.
ಅವಿವಾ ಅವರು ಹೇರ್ ಬನ್ ಮಾಡಿ ಆಕರ್ಷಕವಾಗಿ ಮೇಕಪ್ ಮಾಡಿಕೊಂಡಿದ್ದರು. ವೈಟ್ ಕಲರ್ ಬ್ಲೌಸ್ ಹಾಗೂ ಸೀರೆ ಉಟ್ಟಿದ್ದರು. ಪರಸ್ಪರ ಅಭಿಷೇಕ್ ಹಾಗೂ ಅವಿವಾ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಫೋಟೋ ರೊಮ್ಯಾಂಟಿಕ್ ಆಗಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿರುವ ಅವಿವಾ ಮಾಮ್ & ಡ್ಯಾಡ್ ಎಂದು ರೆಡ್ ಹಾರ್ಟ್ ಎಮೋಜಿ ಹಾಕಿದ್ದಾರೆ. ಸ್ಯಾಂಡಲ್ವುಡ್ನ ಈ ಜೋಡಿ ಸದ್ಯ ಪೋಷಕರಾಗಿರುವ ಖುಷಿಯಲ್ಲಿದ್ದಾರೆ. ಈ ಸಂದರ್ಭದಲ್ಲಿಯೇ ಅವಿವಾ ಫ್ರೆಂಡ್ ಮದುವೆಯಲ್ಲಿಯೂ ಭಾಗಿಯಾಗಿದ್ದು ಈ ವೇಳೆ ಫೋಟೋಸ್ ತೆಗೆಸಿಕೊಂಡಿದ್ದಾರೆ.
ಅಭಿಷೇಕ್-ಅವಿವಾ ದಂಪತಿಗೆ ಗಂಡು ಮಗು ಜನನವಾಗಿದೆ. ನವೆಂಬರ್ 12ರಂದು ಬೆಳಗ್ಗೆ ಗಂಡು ಮಗುವಿಗೆ ಅವಿವಾ ಜನ್ಮ ನೀಡಿದ್ದಾರೆ. ಮೊಮ್ಮಗನ ಕಂಡು ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಭಾವುಕರಾಗಿದ್ದರು.