ಬಳ್ಳಾರಿ: ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆ ಬರೋಬ್ಬರಿ 25 ವರ್ಷಗಳ ಬಳಿಕ ಪತ್ತೆಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಾಕಮ್ಮ ಎಂಬುವರು 25 ವರ್ಷಗಳ ಬಳಿಕ ಹಿಮಾಚಲ ಪ್ರದೇಶದ ಅನಾಥಾಶ್ರಮದಲ್ಲಿ ಪತ್ತೆಯಾಗಿದ್ದಾರೆ. ಸಾಕಮ್ಮ ಅವರು 25 ವರ್ಷಗಳ ಹಿಂದೆ ಹೊಸಪೇಟೆಯಿಂದ ರೈಲು ಹತ್ತಿ ಹಿಮಾಚಲ ಪ್ರದೇಶಕ್ಕೆ ಹೋಗಿದ್ದರು.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿನ ನಿರಾಶ್ರಿತರ ಶಿಬರದಲ್ಲಿ ಸಾಕಮ್ಮ ಆಶ್ರಯ ಪಡೆದಿದ್ದರು. ಸಾಕಮ್ಮ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ್ ಅವರಿಗೆ ಮಾಹಿತಿ ದೊರೆತಿದೆ. ಪಿ ಮಣಿವಣ್ಣನ್ ಅವರ ನಿರ್ದೇಶನದ ಮೇರೆಗೆ ಮಂಡಿಗೆ ಹೋಗಿದ್ದ ಒಂದು ತಂಡ ಸಾಕಮ್ಮ ವಿವರ ಕಲೆ ಹಾಕಿದ್ದಾರೆ.
Raw Banana: ಬಾಳೆಕಾಯಿ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅನ್ನೋದು ನಿಮಗೆ ಗೊತ್ತಾ..?
ಬಳಿಕ, ಅಧಿಕಾರಿಗಳು ಸಾಕಮ್ಮ ಅವರ ಕುಟುಂಬಸ್ಥರ ಪತ್ತೆ ಹಚ್ಚಿದ್ದಾರೆ. ಆಗ, ಸಾಕಮ್ಮ ಅವರಿಗೆ ಮೂವರು ಮಕ್ಕಳಿರುವುದು ತಿಳಿದಿದೆ. ಬಳಿಕ, ವಿಡಿಯೋ ಕರೆ ಮುಖಾಂತರ ಸಾಕಮ್ಮ ಅವರ ಜೊತೆ ಮಕ್ಕಳು ಮಾತನಾಡಿದ್ದಾರೆ. ತಾಯಿ ಜೊತೆ ಮಾತಾಡುವಾಗ ಮಕ್ಕಳು ಭಾವುಕರಾದರು.