ಬೆಂಗಳೂರು: ಯಾವ ಹೆಣ್ಮಗಳಾದ್ರೂ ಷಡ್ಯಂತ್ರ ಮಾಡಿ ಹೇಳಿಕೆ ಕೊಡಲು ಆಗಲ್ಲ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಸಿ.ಟಿ ರವಿ ಪದ ಬಳಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಬಗ್ಗೆ ಸಂಸ್ಕೃತಿ ಬಗ್ಗೆ ಪಾಠ ಹೇಳುತ್ತಾರೆ. ಇದು ಅವರ ಸಂಸ್ಕೃತಿ. ಪ್ರವೋಕ್ ಮಾಡಿದ್ದು ಇರಲಿ ಆದರೆ ಆ ಪದ ಬಳಕೆ ಮಾಡಿದ್ದು ತಪ್ಪು.
Raw Banana: ಬಾಳೆಕಾಯಿ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅನ್ನೋದು ನಿಮಗೆ ಗೊತ್ತಾ..?
ಲಕ್ಷ್ಮಿ ಹೆಬ್ಬಾಳ್ಕರ್ ಇರಲಿ ಅಥವ ಯಾವ ಹೆಣ್ಮಗಳು ಇರಲಿ ಷಡ್ಯಂತ್ರ ಮಾಡಿ ಹೇಳಿಕೆ ಕೊಡಲು ಆಗಲ್ಲ ಎಂದು ಹರಿಹಾಯ್ದರು. ಪ್ರಹ್ಲಾದ್ ಜೋಷಿ ಫೇಕ್ ಎನ್ಕೌಂಟರ್ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಯಾರನ್ನು ಎನ್ಕೌಂಟರ್ ಮಾಡುವುದು? ಅದು ಫೇಕ್ ಎನ್ಕೌಂಟರ್ ಅಲ್ಲ, ಫೇಕ್ ಕೌಂಟರ್. ಅವರ ತಪ್ಪು ಮುಚ್ಚಿಕೊಳ್ಳೋಕೆ ಫೇಕ್ ಎನ್ಕೌಂಟರ್ ಎಂಬ ಫೇಕ್ ಕೌಂಟರ್ ಮಾಡುತ್ತಿದ್ದಾರೆ ಅಷ್ಟೇ ಎಂದು ಗುಡುಗಿದರು.