ನ್ಯೂಯಾರ್ಕ್: ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಭಯಾನಕ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ಸಬ್ ವೇ ರೈಲಿನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಗುರುತಿಸಲಾಗಿಲ್ಲ, 7:30 ರ ಸುಮಾರಿಗೆ ಬ್ರೂಕ್ಲಿನ್ ಮಾರ್ಗದಲ್ಲಿ ಈ ಘಟನೆ ನಡೆದಿದೆ ಎಂದು ನ್ಯೂಯಾರ್ಕ್ ಸಿಟಿ ಪೊಲೀಸ್ ಆಯುಕ್ತ ಜೆಸ್ಸಿಕಾ ಟಿಸ್ಕಾ ಹೇಳಿದ್ದಾರೆ.
ರೈಲು ನಿಲ್ದಾಣವೊಂದರ ಬಳಿ ಬಂದಾಗ, ಸೀಟಿನಲ್ಲಿ ಮಲಗಿದ್ದ ಮಹಿಳೆಯ ಬಳಿ ಬಂದ ಹಂತಕ, ಲೈಟರ್ ನಂತೆ ಕಾಣಿಸುತ್ತಿದ್ದ ಸಾಧನದಿಂದ ಆಕೆಯ ಬಟ್ಟೆಗೆ ಬೆಂಕಿ ಹಚ್ಚಿದ್ದಾನೆ. ನಂತರ ಮಹಿಳೆ ಬಟ್ಟೆ ನೋಡನೋಡುತ್ತಿದ್ದಂತೆಯೇ ಸುಟ್ಟು ಹೋಗಿದೆ. ಘಟನೆ ನೋಡಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಬಳಿಕ ಮತ್ತೊಂದು ಸಬ್ ವೇ ರೈಲಿನಲ್ಲಿ ಪರಾರಿಯಾಗುತ್ತಿದ್ದ ಹಂತಕವನ್ನು ಬಂಧಿಸಿದ್ದಾರೆ. ಆತನ ಪಾಕೆಟ್ ನಲ್ಲಿ ಲೈಟರ್ ಇತ್ತು ಎಂದು ಟಿಸ್ಕಾ ಹೇಳಿದ್ದಾರೆ.ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.