ದಾವಣಗೆರೆ: ಕೇವಲ 5 ರೂಪಾಯಿ ಕುರ್ಕುರೆಗೆ ಎರಡು ಕುಟುಂಬಗಳ ನಡುವೆ ಮಾರಾಮಾರಿಯಾಗಿ 10 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೊನ್ನೆಬಾಗಿಯಲ್ಲಿ ನಡೆದಿದೆ. ಹೊನ್ನೆಬಾಗಿಯ ಅತೀಫ್ ಉಲ್ಲಾ ಫ್ಯಾಮಿಲಿ ಹಾಗೂ ಸದ್ದಾಂ ಫ್ಯಾಮಿಲಿ ನಡುವೆ ಮಾರಾಮಾರಿಯಾಗಿದೆ. ಅತೀಪ್ ಉಲ್ಲಾ ಅದೇ ಗ್ರಾಮದಲ್ಲಿ ಕಿರಾಣಿ ನಡೆಸುತ್ತಿದ್ದು, ಸದ್ದಾಂ ಕುಟುಂಬದ ಮಕ್ಕಳು ಅದೇ ಅಂಗಡಿಯಲ್ಲಿ ಕುರ್ಕುರೆ ಖರೀದಿ ಮಾಡಿದ್ದಾರೆ.
ಆದರೆ, ಆ ಕುರ್ಕುರೆ ಅವಧಿ ಮೀರಿದೆ ಎಂದು ಸದ್ದಾಂ ಕುಟುಂಬಸ್ಥರು ಅತೀಫ್ನ ಪ್ರಶ್ನೆ ಮಾಡಿದ್ದಾರೆ. ಹೀಗೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಈ ವಿಚಾರವಾಗಿ ಸದ್ದಾಂ ಕುಟುಂಬ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದೆ. ಇದರಿಂದ ರೊಚ್ಚಿಗೆದ್ದ ಅತೀಫ್ ಕುಟುಂಬಸ್ಥರು ಸದ್ದಾಂ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ.
ಸಾಲು-ಸಾಲು ಕಷ್ಟಗಳಿಂದ ಬೇಸತ್ತಿದ್ದೀರಾ.? ಸೋಮವಾರ ಈ ಕೆಲಸ ಮಾಡಿದ್ರೆ ಶಿವನ ಕೃಪೆ ನಿಮಗಿರುತ್ತದೆ!
ಹಲ್ಲೆ ನಡೆಸೋ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ 10 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಬಂಧನದ ಭೀತಿಯಿಂದ 20 ಕ್ಕೂ ಹೆಚ್ಚು ಜನ ಗ್ರಾಮ ತೊರೆದಿದ್ದಾರೆ. ಗ್ರಾಮದಲ್ಲಿ ಬೀಗುವಿನ ವಾತಾವರಣವಿದ್ದು, ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ..