ಬೆಂಗಳೂರು: ಸಿಟಿ ರವಿ ನಡವಳಿಕೆ ನೋಡಿದ್ರೆ ಅವರ ತಾಯಿ, ಹೆಂಡತಿ, ಮಕ್ಕಳಿಗೂ ಗೌರವ ಕೊಡೊಲ್ಲ ಅನ್ನಿಸುತ್ತೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಸಿಟಿ ರವಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಪದೇ ಪದೇ ಹೀಗೆ ಮಾತಾಡೋದನ್ನ ರಾಜ್ಯದ ಜನರು ಗಮನಿಸಬೇಕು. ಹೆಣ್ಣುಮಕ್ಕಳು, ಮಹಿಳೆಯರ ಬಗ್ಗೆ ಮಾತಾಡ್ತಾರೆ. ಅವರ ನಡವಳಿಕೆ ನೋಡಿದ್ರೆ ಅವರ ತಾಯಿ, ಹೆಂಡತಿ, ಮಕ್ಕಳಿಗೂ ಗೌರವ ಕೊಡೊಲ್ಲ ಅನ್ನಿಸುತ್ತೆ.
ಆರ್ಎಸ್ಎಸ್ ತರಬೇತಿ ಕೇಂದ್ರ ಈಗಲಾದರೂ ಬಿಜೆಪಿ ನಾಯಕರಿಗೆ ಕಡಿವಾಣ ಹಾಕಬೇಕು. ಬಿಜೆಪಿಯ ಒಬ್ಬೇ ಒಬ್ಬ ನಾಯಕರು ಈ ಹೇಳಿಕೆ ಖಂಡಿದೇ. ತಿರುಚುವ ಕೆಲಸ ಮಾಡ್ತಿದ್ದಾರೆ. ಮಾಧ್ಯಮಗಳ ಬಳಿ ದಾಖಲೆ ಇದ್ದರು ಕೂಡಾ ಬೇರೆ ವಿಚಾರಗಳನ್ನು ಪ್ರಚಾರಕ್ಕೆ ಬಿಡುತ್ತಿದ್ದೀರಿ. ಮಾಧ್ಯಮಗಳು ಜನಪ್ರತಿನಿಧಿಗಳು ಹೀಗೆ ಮಹಿಳಾ ಕುಲಕ್ಕೆ ಆದ ಅವಮಾನದ ಬಗ್ಗೆ ಮಾತಾಡುತ್ತಿಲ್ಲ. ಆ ನಾಯಕರು ಕ್ಷಮೆ ಕೋರುತ್ತಿಲ್ಲ. ಮಾಧ್ಯಮಗಳು ಯಾಕೆ ಅವರಿಗೆ ಬೆಂಬಲ ಕೊಡ್ತೀರಾ ಡಿಕೆ ಸುರೇಶ್ ಗರಂ ಆದರು.
ಸಾಲು-ಸಾಲು ಕಷ್ಟಗಳಿಂದ ಬೇಸತ್ತಿದ್ದೀರಾ.? ಸೋಮವಾರ ಈ ಕೆಲಸ ಮಾಡಿದ್ರೆ ಶಿವನ ಕೃಪೆ ನಿಮಗಿರುತ್ತದೆ!
ವಿರೋಧ ಪಕ್ಷದ ನಾಯಕರು ಈ ರೀತಿ ಪ್ರವೃತ್ತಿ ಪದೇ ಪದೇ ತೋರಿಸುತ್ತಿದ್ದಾರೆ. ಕರ್ನಾಟಕದ ಗೌರವ ಕಡಿಮೆ ಮಾಡ್ತಿದ್ದಾರೆ. ಕನ್ನಡಿಗರು ಸುಸಂಸ್ಕೃತರು ಅಂತ ಹೇಳ್ತಾರೆ. ಆದರೆ ಬಿಜೆಪಿ ನಾಯಕರ ಆಟ ನೋಡಿದ್ರೆ 10-12 ವರ್ಷಗಳಿಂದ ಇದೇ ರೀತಿ ಬಿಜೆಪಿ ಅವರು ನಡೆಸಿಕೊಂಡು ಬರ್ತಿದ್ದಾರೆ. ಮೌಲ್ಯಗಳು ಕುಸಿಯುತ್ತಿದ್ದು ಓಲೈಕೆ ಹೆಚ್ಚಾಗುತ್ತಿದೆ. ಜನಪ್ರತಿನಿಧಿಗಳ ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಎಚ್ಚರಿಕೆ ಇಂದ ನಡೆಯಬೇಕು ಅಂತ ತಿಳಿಸಿದರು.