ದೊಡ್ಡಬಳ್ಳಾಪುರ: ದಕ್ಷಿಣ ಭಾರತದಲ್ಲೇ ಹೆಚ್ಚು ಪ್ರಸಿದ್ದಿ ಪಡೆದಿರುವ ತಾಲೂಕಿನ ತೂಬಗೆರೆ ಹೋಬಳಿಯ ಶ್ರೀ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯು ಡಿ.20ರಿಂದ ಪ್ರಾರಂಭವಾಗಿದೆ. ತುಂಬು ಜಾತ್ರೆಗೆ ಜಾನುವಾರುಗಳನ್ನು ಮಾರಾಟ ಮತ್ತು ಕೊಂಡು ಕೊಳ್ಳಲು ಸಾಲು ಸಾಲಾಗಿ ರೈತರು ದೂರದ ಊರುಗಳಿಂದ ಬರುತ್ತಿದ್ದಾರೆ.ಜಾತ್ರೆಯಲ್ಲಿ ಹಸಿದವರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹಾಗೂ ವಕೀಲ ಪ್ರತಾಪ್ ಹೇಳಿದರು.
ರಸ್ತೆಯಲ್ಲೇ ನಾಯಿಗಳ ದಾಳಿ: ಕಿರುಚಿ ಚೀರಾಡಿದ ಬಾಲಕ! ಸ್ವಲ್ಪದರಲ್ಲೇ ಬಚಾವ್!
ಘಾಟಿ ದನಗಳ ಜಾತ್ರೆಯಲ್ಲಿ ರೈತರಿಗೆ ಊಟ ವಿನಿಯೋಗದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಾನದಲ್ಲೇ ಶ್ರೇಷ್ಠದಾನ ಅನ್ನದಾನ. ದೂರದ ಊರುಗಳಿಂದ ರೈತರು ಜಾತ್ರೆಗೆ ಬಂದಿರುತ್ತಾರೆ. ಅವರ ಹಸಿವನ್ನ ನೀಗಿಸುವುದು ನಮ್ಮ ಕರ್ತವ್ಯ. ಆದ್ದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಅನ್ನದಾನವನ್ನು ಮೂರು ದಿನಗಳ ಕಾಲ ವಿತರಣೆ ಮಾಡಲಾಗುತ್ತದೆ. ರೈತರು ಇದನ್ನ ಸದುಪಯೋಗ ಪಡೆದುಕೊಳ್ಳಬೇಕು. ಇದರ ಜೊತೆಗೆ ಸುಮಾರು ನೂರು ಕೆ.ಜಿಯಷ್ಟು ಹಣ್ಣು ಹಂಪಲುಗಳನ್ನು ರೈತರಿಗೆ ವಿತರಣೆ ಮಾಡಿದ್ದೇವೆ ಎಂದರು.
ಈ ವೇಳೆ ಘಾಟಿ ಗ್ರಾಮ ಪಂಚಾಯಿತಿ ಸದಸ್ಯ ವಾಸು, ತೂಬಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ್ಯ ಆನಂದ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.