ಬೆಂಗಳೂರು:- ನಗರದಲ್ಲಿ ನಾಯಿಗಳ ದಾಳಿ ಪ್ರಕರಣ ದಿನೇ ದಿನೇ ಹೆಚ್ಚುತ್ತಿದ್ದು, ಬಿಬಿಎಂಪಿ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ. ಇದರಿಂದ ಸಿಟಿ ಮಂದಿ ರೋಸಿ ಹೋಗಿದ್ದಾರೆ.
ಬೆಂಗಳೂರಿಗರಿಗೆ ಟ್ರಾಫಿಕ್ ಕಿರಿಕಿರಿ: ಬೆಂಗಳೂರು – ತುಮಕೂರು ಹೆದ್ದಾರಿಯಲ್ಲಿ BBMP ಮಾಸ್ಟರ್ ಪ್ಲ್ಯಾನ್!
ಅದರಂತೆ ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಗುಂಪು ಗುಂಪಾಗಿ ಬೀದಿ ನಾಯಿಗಳು ದಾಳಿ ಮಾಡಿದ ಘಟನೆ ಬೆಂಗಳೂರಿನ ಕೆಆರ್ ಪುರಂನ ಸೊನ್ನೆನಹಳ್ಳಿಯಲ್ಲಿ ನಡೆದಿದೆ.
ನಾಯಿಗಳು ಅಟ್ಯಾಕ್ ಮಾಡುತ್ತಿದ್ದಂತೆ ತಪ್ಪಿಸಿಕೊಳ್ಳುವ ಸಲುವಾಗಿ ಬಾಲಕ ಓಡಿದ್ದಾನೆ. ಬಾಲಕ ಓಡುತ್ತಿದ್ದಂತೆ ಶ್ವಾನಗಳು ಆತನನ್ನು ಅಟ್ಟಾಡಿಸಿವೆ. ಈ ವೇಳೆ ತಪ್ಪಿಸಿಕೊಳ್ಳುವಾಗ ಬಾಲಕ ನೆಲದ ಮೇಲೆ ಬಿದ್ದಿದ್ದಾನೆ. ಈ ಸಂದರ್ಭ ನಾಯಿಗಳು ಬಾಲಕನ ಮೇಲೆ ಎರಗಿವೆ.
ನಾಯಿಗಳು ತನ್ನ ಮೇಲೆ ಎರಗುತ್ತಿದ್ದಂತೆ ಕೂಡಲೇ ಬಾಲಕ ಕಿರುಚಿಕೊಂಡಿದ್ದು, ಕಿರುಚಾಟ ಕೇಳಿ ಸ್ಥಳೀಯರು ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.