ಬಿಗ್ ಬಾಸ್ ಸೀಸನ್ 11 ಬಹಳ ಕುತೂಹಲಕಾರಿಯಾಗಿ ಮೂಡಿ ಬರುತ್ತಿದ್ದು, ಎಲ್ಲರನ್ನೂ ರಂಜಿಸುತ್ತಿದೆ. ಇನ್ನೂ ಎಂದಿನಂತೆ ಈ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ತ್ರಿವಿಕ್ರಮ್ ಔಟ್ ಆಗಿದ್ದಾರೆ. ಆದರೆ ಅವರು ಹೊರ ಬಂದಿಲ್ಲ. ಮತ್ತೆ ಒಳ ಹೋಗಲಿದ್ದಾರೆ.ತ್ರಿವಿಕ್ರಂ ನಿಜಕ್ಕೂ ಎಲಿಮಿನೇಟ್ ಆದರು ಎಂದು ಭಾವಿಸಿದ ಭವ್ಯಾ ಅವರು ಗಳಗಳನೆ ಕಣ್ಣೀರು ಹಾಕಿದರು.
ವಾರ ತ್ರಿವಿಕ್ರಂ ಅವರನ್ನು ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದರು. ತಮ್ಮ ತಂಡದವರನ್ನು ಉಳಿಸಲು ಹೋಗಿ ಅವರು ಈ ರೀತಿ ಮಾಡಿದ್ದರು. ಈ ಬಗ್ಗೆ ಸುದೀಪ್ ಅವರು ಎಚ್ಚರಿಕೆ ಕೂಡ ನೀಡಿದ್ದರು. ಆದರೆ, ತ್ರಿವಿಕ್ರಂ ಅವರಿಗೆ ತಾವು ಇದ್ದೇ ಇರುತ್ತೇವೆ ಎನ್ನುವ ಓವರ್ಕಾನ್ಫಿಡೆನ್ಸ್ ಇತ್ತು. ಅದನ್ನು ಬ್ರೇಕ್ ಮಾಡಬೇಕು ಎನ್ನುವ ಕಾರಣಕ್ಕೆ ಈ ವಾರ ಎಲಿಮಿನೇಷನ್ ಡ್ರಾಮಾ ಮಾಡಲಾಗಿದೆ.
ಈ ವಾರ ಯಾವುದೇ ವೋಟಿಂಗ್ ಲೈನ್ ತೆರೆದಿರಲಿಲ್ಲ. ಆದಾಗ್ಯೂ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಯಿತು. ಅಂತಿಮವಾಗಿ ತ್ರಿವಿಕ್ರಂ ಅವರು ದೊಡ್ಮನೆಯಿಂದ ಹೊರ ಹೋಗುತ್ತಿದ್ದಾರೆ ಎಂದು ಸುದೀಪ್ ಘೋಷಣೆ ಮಾಡಿದರು. ‘ನಿಮಗೆ ನನ್ನ ಜೊತೆ ಬಂದು ಸೇರಲು ಐದು ನಿಮಿಷ ಕಾಲಾವಕಾಶ ಇದೆ’ ಎಂದರು ಕಿಚ್ಚ. ಎಲ್ಲರೂ ಇದು ಪ್ರ್ಯಾಂಕ್ ಇರಬಹುದು ಎಂದುಕೊಂಡಿದ್ದರು. ತ್ರಿವಿಕ್ರಂ ಕೂಡ ಹಾಗೆಯೇ ಅಂದುಕೊಂಡಂತೆ ಇತ್ತು. ಆದರೆ, ಹಾಗಾಗಲಿಲ್ಲ.
ಬಿಗ್ ಬಾಸ್ ಗಾರ್ಡನ್ ಏರಿಯಾಗೆ ಬರುತ್ತಿದ್ದಂತೆ ಮುಖ್ಯದ್ವಾರ ಓಪನ್ ಆಯಿತು. ಅದರಿಂದ ಹೊರಕ್ಕೂ ಹೋದರು. ಆಗ ಭವ್ಯಾ ಗೌಡ ಅವರು ಅಳೋಕೆ ಆರಂಭಿಸಿದರು. ಇದು ಅವರಿಗೆ ಸಾಕಷ್ಟು ಶಾಕಿಂಗ್ ಎನಿಸಿತು. ಗೆಲ್ಲಬೇಕಿದ್ದ ಸ್ಪರ್ಧಿ ಈ ರೀತಿ ಎಲಿಮಿನೇಟ್ ಆದರಲ್ಲ ಎಂದು ಎಲ್ಲರೂ ಶಾಕ್ ಆದರು.