ಶಿವಮೊಗ್ಗದ ವಾದಿ ಎ ಹುದಾ ಬಡಾವಣೆಯಲ್ಲಿನ ಸೆಕೆಂಡ್ಮೇನ್ನಲ್ಲಿ ಇವತ್ತು ಬೆಳಗ್ಗೆ ಬೆಳಗ್ಗೆ ಮಹಿಳೆಯೊಬ್ಬಳ ಕೊಲೆ ನಡೆದಿದೆ. ಮೂಲತಃ ಸಾಗರದ ಆನಂದಪುರದ ನಿವಾಸಿಯಾಗಿರುವ ರುಕ್ಸಾನಾ ಎಂಬಾಕೆಯನ್ನು ಆಕೆಯ ಗಂಡ ಯೂಸುಫ್ ಕೊಲೆ ಮಾಡಿದ್ದಾನೆ. ಕುಡುಗೋಲು ಹಾಗೂ ಚಾಕು ಸೇರಿದಂತೆ ವಿವಿಧ ಆಯುದಗಳಿಂದ ಹಲ್ಲೆ ಮಾಡಿ ಯೂಸುಫ್ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದು, ಪ್ರಕರಣದ ಸಂಬಂಧ ಆತನ ಬಂಧನವೂ ಆಗಿದೆ. ಇವೆಲ್ಲದರ ನಡುವೆ ಕಾಡುತ್ತಿರುವುದು ನಡೆದ ಬರ್ಬರ ಹತ್ಯೆಗೆ ಕಾರಣವಾದ ಆ ವಿಚಾರ.
ಶಿವಮೊಗ್ಗದ ವಾದಿ ಏ ಹುದಾ ಬಡಾವಣೆಯ ಸೆಕೆಂಡ್ ಮೇನ್ನ ಐದನೇ ಕ್ರಾಸ್ನಲ್ಲಿರುವ ಪುಟ್ಟ ಮನೆಯೊಂದರಲ್ಲಿ ನಡೆದ ರುಕ್ಸಾನ ಹತ್ಯೆಯ ಕ್ರೈಂ ಸೀನ್ನಲ್ಲಿ ನಡೆದಿದ್ದೇನು ಎಂದು ನೋಡುವುದಾದರೆ, ಕಳೆದ ಒಂದು ವಾರದ ಹಿಂದೆ ಯೂಸುಫ್ ಹಾಗೂ ರುಕ್ಸಾನಾ ನಡುವೆ ಜಗಳವಾಗಿತ್ತು ಎಂಬ ವಿಚಾರ ಗೊತ್ತಾಗುತ್ತೆ. ಇದೇ ಕಾರಣಕ್ಕೆ ಆಕೆ ಸಾಗರದ ಆನಂದಪುರದಲ್ಲಿರುವ ತನ್ನ ತವರುಮನೆಗೆ ಹೋಗಿದ್ದಳು. ಈ ನಡುವೆ ನಿನ್ನೆದಿನ ಯೂಸುಫ್ ಮಗಳಿಗೆ ಹುಷಾರ್ ಇಲ್ಲ ಎಂದು ಹೇಳಿ ತನ್ನ ಪತ್ನಿಗೆ ಕರೆ ಮಾಡಿ ಬರುವಂತೆ ತಿಳಿಸಿದ್ದ.
PM Kisan Mandhan: ರೈತರಿಗೆ ಈ ಯೋಜನೆ ಅಡಿಯಲ್ಲಿ ಸಿಗಲಿದೆ ತಿಂಗಳಿಗೆ 3,000 ರೂಪಾಯಿ..! ಈಗಲೇ ಅರ್ಜಿ ಸಲ್ಲಿಸಿ
ಆದರೆ ಜಗಳದ ಹಿನ್ನೆಲೆಯಲ್ಲಿ ರುಕ್ಸಾನಾ ಮತ್ತವರ ಪೋಷಕರು ನೇರವಾಗಿ ಮಗಳನ್ನು ಅಡ್ಮಿಟ್ ಮಾಡಿರುವ ಆಸ್ಪತ್ರೆಗೆ ಬರುವುದಾಗಿ ಹೇಳುತ್ತಾರೆ. ಇದಕ್ಕೆ ಯೂಸುಫ್, ಮಗಳನ್ನ ಡಿಸ್ಚಾರ್ಜ್ ಮಾಡಿಕೊಂಡು ಬಂದಿದ್ದೇನೆ ಹಾಗಾಗಿ ಅಣ್ಣನ ಮನೆಗೆ ಬರುವಂತೆ ತಿಳಿಸಿದ್ದ. ಆತನ ಮಾತಿನಂತೆ ರುಕ್ಸಾನಾ ಹಾಗೂ ಅವಳ ಪೋಷಕರು ಯೂಸುಫ್ನ ಅಣ್ಣನ ಮನೆಗೆ ನಿನ್ನೆ ಬಂದಿದ್ದರು. ಇವತ್ತು ಬೆಳಗ್ಗೆ ರುಕ್ಸಾನಾ ಜೊತೆ ಪರ್ಸನಲ್ ಆಗಿ ಮಾತನಾಡಬೇಕು ಎಂದು ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಯೂಸುಫ್ ಅಲ್ಲಿಗೆ ತೆರಳಿದ 15 ನಿಮಿಷದಲ್ಲಿ ಆಕೆಯ ಜೊತೆಗೆ ಜಗಳ ತೆಗೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನುತ್ತದೆ ಪೊಲೀಸ್ ಮೂಲ.
ಯೂಸುಫ್ನ ಸಹೋದರ ಹೇಳಿದ್ದೇನು?
ಯೂಸುಫ್ನ ಸಹೋದರ ಇಸ್ಮಾಯಿಲ್ ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, ರುಕ್ಸಾನ ತವರು ಮನೆಗೆ ಹೋಗಿದ್ದಳಂತೆ. ಆಕೆಯನ್ನು ಕರೆಸಿಕೊಂಡ ಯೂಸುಫ್ ಕೊಲೆ ಮಾಡಿದ್ದಾನೆ. ಅನೈತಿಕ ಸಂಬಂಧ ಕೊಲೆಗೆ ಕಾರಣ ಎನ್ನುವುದು ಸಹೋದರ ಇಸ್ಮಾಯಿಲ್ ಆರೋಪ. ಯೂಸುಫ್ನೇ ತನ್ನ ಪತ್ನಿಯನ್ನು ತವರಿಗೆ ಕಳುಹಿಸಿದ್ದ.
ಆಕೆಗೆ ಅಕ್ರಮ ಸಂಬಂಧ ಇದೆ ಎಂಬ ಅನುಮಾನ ಹೊಂದಿದ್ದ ಯೂಸುಫ್ ಅದಕ್ಕೆ ಸಂಬಂಧಿಸಿದಂತೆ ಮೊಬೈಲ್ ಕರೆಗಳ ಸಾಕ್ಷ್ಯ ತೋರಿಸಿ ಜಗಳವಾಡಿದ್ದ. ಇದೇ ಕಾರಣಕ್ಕೆ ಆಕೆಯನ್ನ ತವರಿಗೆ ಕಳುಹಿಸಿದ್ದ ಯೂಸುಫ್ ಇವತ್ತು ತನ್ನ ಮನೆಗೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾನೆ. ಬಳಿಕ ರುಕ್ಸಾನಾರ ಸಂಬಂಧಿಕರಿಗೆ ತಿಳಿಸಿದ್ದರಿಂದ ವಿಷಯ ಗೊತ್ತಾಗಿದೆ ಎನ್ನುತ್ತಾನೆ ಇಸ್ಮಾಯಿಲ್
ಸ್ಥಳೀಯರು ಹೇಳೋದೇನು?
ಸ್ಥಳೀಯರು ರುಕ್ಸಾನಾ ಒಳ್ಳೆಯ ಗೃಹಿಣಿಯಾಗಿದ್ದರು ಎಂದು ಹೇಳುತ್ತಿದ್ದಾರೆ. ಇನ್ನೂ ರುಕ್ಸಾನಾ ಸಂಬಂಧಿಕರು ಸಹ ಯೂಸುಫ್ ಕಡೆಯವರ ಆರೋಪವನ್ನು ಅಲ್ಲಗಳೆದಿದ್ದಾರೆ. ಈ ಸಂಬಂಧ ತನಿಖೆಗೆ ಮುಂದಾಗಿರುವ ಪೊಲೀಸರು ಯೂಸುಫ್ನನ್ನ ವಶಕ್ಕೆ ಪಡೆದು, ಪ್ರಕರಣದ ಕಾನೂನು ಪ್ರಕ್ರಿಯೆಗಳನ್ನ ನಡೆಸ್ತಿದ್ದಾರೆ.
ಅಲ್ಲದೆ ಇಡೀ ಪ್ರಕರಣವನ್ನು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸ್ತಿದ್ದಾರೆ. ಒಟ್ಟಾರೆ 38 ವರ್ಷದ ರುಕ್ಸಾನ ಹಾಗೂ ಯೂಸುಫ್ನ ನಡುವೆ ಮೂಡಿದ ಸಂಶಯದಿಂದಾಗಿ ರುಕ್ಸಾನ ಸಾವನ್ನಪ್ಪಿದ್ದಾಳೆ. ಎಸಿ ಮೆಕಾನಿಕ್ ಆಗಿ ಇಲ್ಲಿವರೆಗೂ ಸುಂದರ ಸಂಸಾರ ನಡೆಸಿದ್ದ ಯೂಸುಫ್ ಪೊಲೀಸ್ ವಶದಲ್ಲಿದ್ದಾನೆ. ಇವರ ನಡುವೆ ಭವಿಷ್ಯ ಕಟ್ಟಿಕೊಳ್ಳಬೇಕಾಗಿದ್ದ ಮಕ್ಕಳು ಮಾತ್ರ ಈಗ ಆಗಿದ್ದು ಅತಂತ್ರ.